Karunadu Studio

ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿಗಳಾದ ಡಾ ಎಸ್ ವಿದ್ಯಾಶಂಕರ್

ಧಾರವಾಡ

ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್ ವಿದ್ಯಾಶಂಕರ ಹೇಳಿದರು.

ಧಾರವಾಡದ ಎಸಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ 14 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು,
ಇಂಜಿನಿಯರಗಳಿಗೆ ನಿರಂತರ ಕಲಿಕೆಯಿಂದ ಅವರ ಜ್ಞಾನ ವೃದಿಸುತ್ತದೆ ಮತ್ತು ಉಪಯುಕ್ತವಾಗಿರುತ್ತದೆ ಎಂದು ಅವರು ಹೇಳಿದರು ಮತ್ತು ಈ ಕಾರ್ಯದಲ್ಲಿ ವಿಟಿಯು ಮುಂದಾಳತ್ವವನ್ನು ವಹಿಸಿದೆ ಮತ್ತು ಎಸ್ಡಿಎಂಸಿಇಟಿಯಂತಹ ಕಾಲೇಜುಗಳು ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿರಲಿ ಎಂದು ಹಾರೈಸಿದರು.

ಎಸಡಿಎಂ ಈ ಸೊಸೈಟಿಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ ಅವರು ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಎಸಡಿಎಂ ಸಿಇಟಿ ಕಳೆದ 45 ವರ್ಷಗಳಿಂದ ಅತ್ಯುತ್ತಮ ತಾಂತ್ರಿಕ ಕುಶಾಗ್ರಮತಿ ಮತ್ತು ಉತ್ತಮ ಮೌಲ್ಯಗಳೊಂದಿಗೆ ಇಂಜಿನಿಯರ್ಗಳನ್ನು ತಯಾರು ಮಾಡುವಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಕಾಲೇಜಿನ ಎಲ್ಲಾ ಹಿಂದಿನ ಪ್ರಾಂಶುಪಾಲರ ಸೇವೆಯನ್ನು ಸ್ಮರಿಸಿದ ಅವರು ಕಾಲೇಜಿನ ಅಭಿವೃದ್ಧಿಯಲ್ಲಿ ಅವರು ಎಲ್ಲಾ ಅಧ್ಯಾಪಕರ ಕೊಡುಗೆಗಳನ್ನು ಉಲ್ಲೇಖಿಸಿದರು.

ಪ್ರಾಂಶುಪಾಲ ಡಾ.ರಮೇಶ ಎಲ್.ಚಕ್ರಸಾಲಿ ಸ್ವಾಗತಿಸಿ, ಕ್ಯಾಂಪಸ್ನಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಸಂಸ್ಥೆಯ ಸಾಧನೆಗಳನ್ನು ಎತ್ತಿ ತೋರಿಸುವ ಕಾಲೇಜು ವರದಿಯನ್ನು ಮಂಡಿಸಿದರು.

ಕಾಲೇಜಿನ ಅತ್ಯುತ್ತಮ ಉದ್ಯೋಗ ದಾಖಲೆ ಕುರಿತು ಪ್ರಸ್ತಾಪಿಸಿದರು. ಕ್ಯಾಂಪಸನಲ್ಲಿ ನಡೆಯುತ್ತಿರುವ ಸುಮಾರು ರೂ. 5 ಕೋಟಿ ಮೌಲ್ಯದ ಪ್ರಾಯೋಜಿತ ಪ್ರಾಜೆಕ್ಟಗಳ ಬಗ್ಗೆ ಪ್ರಸ್ತಾಪಿಸಿದರು ಮತ್ತು ಕಾಲೇಜು ಅನೇಕ ಏಜೆನ್ಸಿಗಳಿಂದ ಅತ್ಯುತ್ತಮ ಶ್ರೇಯಾಂಕಗಳನ್ನು ಪಡೆದಿದೆ ಎಂದು ಹೈಲೈಟ್ ಮಾಡಿದರು.

ಕಾಲೇಜಿನ ಉನ್ನತ ಅಂಕ ಗಳಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮಿಸ್ ಲತಾ ಶ್ರೀಪಾದ್ ನಾಯಕ್ ಅವರಿಗೆ (9.85 ಸಿ ಜಿ ಪಿ ಎ) ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಚಿನ್ನದ ಪದಕವನ್ನು ನೀಡಲಾಯಿತು. ಏಳು ಇಂಜಿನಿಯರಿಂಗ್ ವಿಭಾಗಗಳು ತಲಾ ಮೂರು ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರ್ಯಾಂಕ್ ಮತ್ತು ಪದಕಗಳನ್ನು ನೀಡಲಾಯಿತು. ಒಟ್ಟು 696 ಪದವಿಪೂರ್ವ ವಿದ್ಯಾರ್ಥಿಗಳು, 9 ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ರಮಾಣಪತ್ರಗಳನ್ನು ಪಡೆದರು. ಪಿಎಚಡಿ ಪ್ರಶಂಸನಾ ಪತ್ರಗಳನ್ನು ಪಡೆದರು.

ಜೀವಂಧರಕುಮಾರ ಕಾರ್ಯದರ್ಶಿ, ಎಸಡಿಎಂ ಈ ಸೊಸೈಟಿ, ಧಾರವಾಡ, ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನಗಳು ಮತ್ತು ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಡೀನ್, ಶೈಕ್ಷಣಿಕ ಕಾರ್ಯಕ್ರಮ ಡಾ.ವಿಜಯ ಸಿ ಅವರಿಂದ ಹೊರಹೋಗುವ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಪ್ರೊ.ಇಂದಿರಾ ಉಮರ್ಜಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಪ್ರೊ.ವಿ.ಕೆ.ಪಾರ್ವತಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂದಿಸಿದರು. ಪ್ರೋ..ವಿ.ಕೆ.ಪಾರ್ವತಿ, ಮತ್ತು ಪ್ರೊ ಇಂದಿರಾ ಉಮರ್ಜಿ ಕಾರ್ಯಕ್ರಮ ನಿರೂಪಿಸಿದರು.

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಅಪರಾಧ ಕರ್ನಾಟಕ ಕ್ರಿಮಿನಲ್

“ಗಾಂಜಾ‌ ಬೆಳೆದಿದ್ದ ಆರೋಪಿಗಳ ಬಂಧನ”

ಅಕ್ರಮವಾಗಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಹೇಮರೆಡ್ಡಿ ಯಲ್ಲಪ್ಪ ರೆಡ್ಡಿ‌ ಎಂಬಾತ
Translate »