ವಾಲ್ಮೀಕಿಯವರ ಬದುಕು ಪ್ರತಿಯೊಬ್ವರಿಗೂ ಆದರ್ಶ ಆಗಬೇಕೆಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಅಭಿಪ್ರಾಯಪಟ್ಟರು.

ನವದೆಹಲಿಯ ಕರ್ನಾಟಕ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಸಮಯದಲ್ಲಿ ಜಗದೀಶ ಶೆಟ್ಟರ್, ವಾಲ್ಮೀಕಿಯವರ ಭಾವಚಿತ್ರಕ್ಕೆ ಹೂವು ಹಾಕಿ ಮಾತನಾಡಿದರು.
ಇದೇ ಸಮಯದಲ್ಲಿ ಹಾಜರಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ವಾಲ್ಮೀಕಿಯವರನ್ನ ಸ್ಮರಿಸಿದರು. ಹುಟ್ಟುನಿಂದಲೇ ಯಾರೂ ಒಳ್ಳೆಯವರಾಗಿಯೂ ಕೆಟ್ಟವರಾಗಿಯೂ ಇರುವುದಿಲ್ಲ. ನಮ್ಮ ಕ್ರಿಯೆಗಳು ನಮ್ಮನ್ನ ರೂಪಿಸುತ್ತವೆ ಎನ್ನುವುದಕ್ಕೆ ವಾಲ್ಮೀಕಿಯವರ ಜೀವನವೇ ಸಾಕ್ಷಿ ಎಂದರು.
ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿದರು. ಕೇಂದ್ರದ ಹಲವು ಹಿರಿಯ ಅಧಿಕಾರಿಗಳು ಈ ಸಮಯದಲ್ಲಿ ಉಪಸ್ಥಿತರಿದ್ದರು.