“ಶೃಂಗೇರಿಯ ಶ್ರೀ ಶ್ರೀ ಭಾರತೀ ತೀರ್ಥಮಹಾಸ್ವಾಮಿಗ ಳಿಗೆ ಕಲ್ಯಾಣ ವೃಷ್ಟಿ ಮಹಾಸಮರ್ಪಣೆ”
BY ADMIN
October 19, 2024
0
Comments
296 Views
ಧಾರವಾಡ
ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ 50ನೇ ವರ್ಷದ ಸನ್ಯಾಸ ಸ್ವೀಕಾರ ನಿಮಿತ್ತ ಸುವರ್ಣ ಭಾರತೀ ಅಡಿಯಲ್ಲಿ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತೀ ಸನ್ನಿಧಾನಂಗಳವರ ಅಪ್ಪಣೆಯಂತೆ ಕಲ್ಯಾಣವೃಷ್ಟಿ ಮಹಾಭಿಯಾನ ಸ್ತೋತ್ರ ಸಮರ್ಪಣೆ ಕಾರ್ಯಕ್ರಮ ಅಕ್ಟೋಬರ್ 16 ರಂದು ಧಾರವಾಡದ ಶ್ರೀ ಶೃಂಗೇರಿ ಶಂಕರ ಮಠ ವಿದ್ಯಾ ಭಾರತೀ ಸಭಾಭವನದಲ್ಲಿ ಅತಿ ವಿಜ್ರಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮಕ್ಕೆ ಶೃಂಗೇರಿ ಮಠದ ಪ್ರತಿನಿಧಿಯಾಗಿ ಉಮೇಶ್ ಹರಿಹರ್ ಅವರು , ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷರಾದ ರವಿ ದೇಶಪಾಂಡೆ, ಮುಖ್ಯ ಅತಿಥಿಯಾಗಿ ಜಿ ಆರ್ ಪಾಟೀಲ್ ಹಾಗೂ ಧಾರವಾಡ ಶೃಂಗೇರಿ ಶಾಕಾ ಮಠದ ವ್ಯವಸ್ಥಾಪಕರಾದ ವಿಠ್ಠಲ್ ನಾರಾಯಣ ಶೆಟ್ಟಿ ಹಾಗೂ ವಿವಿಧ ಮಹಿಳಾ ಮಂಡಳ ಅಧ್ಯಕ್ಷರು ಮತ್ತು ಸದಸ್ಯೆಯರು ಮತ್ತು ಆಸ್ತಿಕ ಮಹಾಜನರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಸುಮಾರು ಎರಡೂವರೆ ಸಾವಿರ ಜನಕ್ಕಿಂತ ಹೆಚ್ಚು ಆಸ್ತಿಕರು ಭಾಗವಹಿಸಿದ್ದು, ಇಡೀ ಉತ್ತರ ಕರ್ನಾಟಕದಲ್ಲಿಯೇ, ಒಂದು ದಾಖಲೆ ಆಯಿತು. ಎಲ್ಲರಿಗೂ ಮನಮುಟ್ಟುವಂತೆ ಅತಿ ಶಿಸ್ತಿನಿಂದ ಹಾಗೂ ಶ್ರದ್ಧಾಭಕ್ತಿಯಿಂದ ಸ್ತೋತ್ರ ಸಮರ್ಪಣೆಯನ್ನು ಜಗದ್ಗುರುಗಳ ಪಾದಾರವಿಂದಗಳಲ್ಲಿ ಸಮರ್ಪಿಸಲಾಯಿತು.ಕಾರ್ಯಕ್ರಮದ ನಂತರ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ (೭೩) ಅಮೆರಿಕದಲ್ಲಿ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ