ಬೆಳಗಾವಿ
ಗಡಿ ವಿವಾದವೇ ಇಲ್ಲ, ಗಡಿ ವಿವಾದ ಇದೆ ಎಂದು ಯಾರು ಹೇಳಿದ್ರು! ಚುನಾವಣೆ ಬಂದಾಗ ಮಹಾರಾಷ್ಟ್ರ ನಾಯಕರಿಗೆ ಗಡಿವಿವಾದ ನೆನಪಾಗುತ್ತೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ ಉಡಾಫೆ ಉತ್ತರ ನೀಡಿದ್ದಾರೆ.

ಹೇಗೆ ಬಿಜೆಪಿಗರಿಗೆ ಚುನಾವಣೆ ಬಂದಾಗ ವಕ್ಫ್, ರಾಮಮಂದಿರ ನೆನಪಾಗುತ್ತೋ? ಹಾಗೆ ಚುನಾವಣೆ ಬಂದಾಗ ಮಹಾರಾಷ್ಟ್ರ ನಾಯಕರಿಗೆ ಗಡಿವಿವಾದ ನೆನಪಾಗುತ್ತೆ.
ಚುನಾವಣೆ ಬಂದಾಗ ಮತಗಳ ಬೇಟೆಗೆ ಮಹಾರಾಷ್ಟ್ರ ನಾಯಕರು ಗಡಿವಿವಾದ ಬಗ್ಗೆ ಮಾತನಾಡ್ತಾರೆ.
ಕರ್ನಾಟಕ ದೃಷ್ಠಿಯಿಂದ ಗಡಿ ವಿವಾದ ಮುಗಿದ ಅಧ್ಯಾಯ. ಎಂಇಎಸ್‌ನವರು ಕರಾಳ ದಿನ ಮಾಡ್ತಾರಂದ್ರೆ ಗಡಿ ವಿವಾದ ಇದೆ ಎಂದು ಅರ್ಥವಲ್ಲ. ಈ ಹಿಂದೆ ಗಡಿ ಉಸ್ತುವಾರಿ ಸಚಿವರಾಗಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.