ಬೆಳಗಾವಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅತೀ ಹೆಚ್ಚು ಬಿಜೆಪಿ ಬೆಂಬಲಿತ ನಿರ್ದೇಶಕರಿದ್ರೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕನಿಗೆ ಮಣೆ ಹಾಕಲಾಗಿದೆ.
ಸತೀಶ ಜಾರಕಿಹೊಳಿ ಆಪ್ತ ಅಪ್ಪಾಸಾಹೇಬ್ ಕುಲಗೋಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮೂವರು ಜಾರಕಿಹೊಳಿ ಸೋದರರಿಂದ ಮೂರು ಜನರ ಹೆಸರು ಪ್ರಸ್ತಾಪ ಮಾಡಲಾಗಿತ್ತು. ಅಣ್ಣಾಸಾಹೇಬ್ ಜೊಲ್ಲೆ ಪರ ರಮೇಶ್ ಜಾರಕಿಹೊಳಿ, ಸುಭಾಷ ಡವಳೇಶ್ವರ ಪರ ಬಾಲಚಂದ್ರ ಜಾರಕಿಹೊಳಿ, ಅಪ್ಪಾಸಾಹೇಬ್ ಕುಲಗೋಡೆ ಪರ ಸಚಿವ ಸತೀಶ ಜಾರಕಿಹೊಳಿ ಬೆಂಬಲ ನೀಡಿದ್ದರು.
ಮೂವರ ಹೆಸರು ಸಭೆಯಲ್ಲಿ ಚರ್ಚೆ ಮಾಡಿ ಅಂತಿಮವಾಗಿ ಕುಲಗೋಡೆ ಹೆಸರು ಅಂಗೀಕರಿಸಲಾಯಿತು. ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕೆ ಬ್ಯಾಂಕ್ ಅಭಿವೃದ್ಧಿ ದೃಷ್ಟಿಕೋನದಿಂದ ಕುಲಗೋಡೆ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಗೆ ನಿರ್ದೇಶಕರು ಮತ್ತು ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಹಮತ ಸೂಚಿಸಿದ್ದಾರೆ. ಡಿಸಿಸಿ ಬ್ಯಾಂಕ್ ಗೆ ಎಲ್ಲ ನಿರ್ದೇಶಕರ ಜೊತೆಗೆ ತೆರಳಿ ಅಪ್ಪಾಸಾಹೇಬ್ ಕುಲಗೋಡೆ ನಾಮಪತ್ರ ಸಲ್ಲಿಸಿದರು.