ಬೆಳಗಾವಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅವಿರೋಧ ಆಯ್ಕೆ ವಿಚಾರವಾಗಿ ಜಿಲ್ಲೆಯ ಎಲ್ಲಾ ನಾಯಕರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಗಿದೆ. ಅಧ್ಯಕ್ಷರಾಗಿ ರಾಯಬಾಗದ ಅಪ್ಪಾಸಾಹೇಬ್ ಕುಲಗೋಡೆ ಆಯ್ಕೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಉಪಾಧ್ಯಕ್ಷರಾಗಿ ಸುಭಾಷ ಡವಳೇಶ್ವರ ಮುಂದುವರೆಯುತ್ತಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಎಲ್ಲರನ್ನ ಕೇಳಿ ಮಾಡಿದ್ದೇವೆ. ರಮೇಶ ಕತ್ತಿ, ಲಕ್ಷ್ಮಣ ಸವದಿ ನೇರವಾಗಿ ಸಭೆಗೆ ಬರ್ತಾರೆ. ಅಣ್ಣಾಸಾಹೇಬ್ ಜೊಲ್ಲೆ, ದೊಡ್ಡಗೌಡರ್ ಸೇರಿ ಬಹಳಷ್ಟು ಜನರ ಹೆಸರಿತ್ತು. ಈ ಆಯ್ಕೆಯಲ್ಲಿ ಯಾವುದೇ ಸ್ಟ್ಯಾಟರ್ಜಿ ಇಲ್ಲಾ. ಯಾರಿಗೂ ನೋವು ಆಗದಂತೆ ಈ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಜಾರಕಿಹೊಳಿ ಬ್ರದರ್ಸ್ ಒಟ್ಟಿಗೆ ಸೇರಿ ಸಭೆ ವಿಚಾರ ಮಾಡಿದ್ದೆವೆ. ಎಲ್ಲರದ್ದು ಒಂದೊಂದು ಅಭ್ಯರ್ಥಿ ಆಯ್ಕೆ ಇತ್ತು. ಮೂರು ಜನರ ಅಭ್ಯರ್ಥಿ ಒಂದೇ ಮಾಡಲು ಕೂಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೂರು ಕಡೆ ಉಪಚುನಾವಣೆ ವಿಚಾರ.
ಮೂರು ಕಡೆ ಗೆಲ್ಲುವ ವಿಶ್ವಾಸ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅರ್ಧ ಈಗಾಗಲೇ ನಿರ್ಧಾರ ಆಗಿದೆ. ಇನ್ನೂ ಅರ್ಧ ಬಾಕಿ ಇದೆ, ಕಾದುನೋಡೋಣ. ನಾವು 105 ಹಳ್ಳಿಗಳಿಗೆ ಓಡಾಡಿ ವೋಟ್ ಹಾಕುವಂತೆ ಹೇಳಿದ್ದೇವೆ.
ಕಾಂಗ್ರೆಸ್ ಸರ್ಕಾರ ಒಲೈಕೆ ರಾಜಕಾರಣ ಮಾಡ್ತಿದೆ ಎಂಬ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲಾರನ್ನೂ ಸಮಾನತೆ ದೃಷ್ಟಿಯಿಂದ ನೋಡ್ತೆವಿ.
ಒಬ್ಬರಿಗೆ ಹೆಚ್ಚು ಕಮ್ಮಿ ಒಲೈಕೆ ಎನಿಲ್ಲ. ನಮ್ಮದು ಬಸವಣ್ಣನವರ ಸಿದ್ದಾಂತ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಪಕ್ಷ ಜವಾಬ್ದಾರಿ ಕೊಟ್ಟಿದ್ದಕ್ಕೆ ಹೆಚ್ಚು ಒತ್ತು ನೀಡಿದ್ದೇವೆ ಎಂದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇವೆ. ಉಪ ಚುನಾವಣೆಯಲ್ಲಿ ಮಾತಿನ ಭರಾಟೆ ಹೆಚ್ಚಾಗಿದೆ. ವೈಯಕ್ತಿಕ ಟೀಕೆ ಆಗಬಾರದು ಅಂತಾ ಹೇಳಿದ್ದೇವೆ.
ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಬೇಕಿತ್ತು ಎಂದು ಹೇಳಿದರು.