ಬೆಳಗಾವಿ
ಪುನಾ ಬೆಂಗಳೂರು ಹೈವೇ ನಲ್ಲಿ ನಡೆದ ದರೋಡೆ ಕೇಸ್’ನಲ್ಲಿ ಕೇಸ್ ದಾಖಲಿಸಿದ್ದವರೆ ಲಾಕ್ ಆದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲಾ ಪೊಲೀಸರಿಂದ ೧ ಕೋಟಿ ೧ ಲಕ್ಷ ಹಣ ಜಪ್ತಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮ ಬಳಿ ಹೈವೇಯಲ್ಲಿ ದರೋಡೆ ಕೇಸ್ ಘಟನೆ ಇದಾಗಿದೆ.


ಕಾರ ಅಡ್ಡಗಟ್ಟಿ ಗನ್ ತೋರಿಸಿ 75 ಲಕ್ಷ ದರೋಡೆ ಮಾಡಿದ್ದಾರೆ ಎಂಬ ಕೇಸ್ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆದರೆ ದೂರುದಾರ ಸೇರಿ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನ ನವೆಂಬರ್ 15 ರಂದು ದರೋಡೆ ಮಾಡಲಾಗಿದೆ ಎಂಬ ಸುಳ್ಳು ದೂರು ನೀಡಿದ್ದರು. ಮಹಾರಾಷ್ಟ್ರದ ಸೂರಜ ಹೊನಮಾನೆ ದೂರು ಕೊಟ್ಟಿದ್ದ ವ್ಯಕ್ತಿ.
ಕೇರಳದಿಂದ ತಂದಿದ್ದ ಹಳೆ ಚಿನ್ನವನ್ನ ಕೊಲ್ಲಾಪುರದಲ್ಲಿ ಮಾರಾಟ ಮಾಡಿ, ಕೋಟ್ಯಾಂತರ ರುಪಾಯಿ ಹಣ ತೆಗೆದುಕೊಂಡು ಹೋಗ್ತಿರುವಾಗ ದರೋಡೆ ನಾಟಕ ಆಡಿದ್ದ ಖದೀಮರು.
ಮಹಾರಾಷ್ಟ್ರದ ಸಾಂಗ್ಲಿಯ ಭರತ ಮಾರಗುಡೆ ಎಂಬಾತನಿಗೆ ಸೇರಿದ್ದ ಹಣ ಇದಾಗಿದೆ. ಆತ ಕೇರಳದಿಂದ ಹಳೆ ಚಿನ್ನವನ್ನ ತೆಗೆದುಕೊಂಡು ಅದನ್ನು ಕೊಲ್ಲಾಪುರದಲ್ಲಿ ಮಾರಾಟ ಮಾಡುತ್ತಿದ್ದನು. ಸೂರಜ ಮತ್ತು ಅಜೇಯ ಈ ಇಬ್ಬರು ಭರತಗಾಗಿ ಕೆಲಸ ಮಾಡುವ ವ್ಯಕ್ತಿಗಳಾಗಿದ್ದರು. ಆರೀಫ್ ಕಾರಿನ ಚಾಲಕನಾಗಿದ್ದನು.
ಪೊಲೀಸರಿಗೆ ಹಣ ದರೋಡೆಯಾಗಿದೆ ಎಂಬ ಸುಳ್ಳು ದೂರು ನೀಡಿ ಆ ಹಣವನ್ನ ತಾವು ಲಪಟಾಯಿಸಲು ಯೋಜನೆ ರುಪಿಸಿದ್ದರು ಎನ್ನಲಾಗಿದೆ.
ದೂರು ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರನಲ್ಲಿದ್ದ ಸೂರಜ ಹೊನಮಾನೆ, ಆರೀಫ್, ಅಜೇಯ ಎಂಬಾತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರನಲ್ಲಿದ್ದ 1 ಕೋಟಿ 1 ಲಕ್ಷ ರುಪಾಯಿಯನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಹೈವೇ ದರೋಡೆ ಸತ್ಯವನ್ನ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಬಿಚ್ಚಿಟ್ಟಿದ್ದಾರೆ.