ಬೆಳಗಾವಿ
ಬೀಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ಶವವಿಟ್ಟು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯವಾಗಿದೆ.

ಬೆಳಗಾವಿ ಬೀಮ್ಸ್ ಆವರಣದ ಹೆರಿಗೆ ವಿಭಾಗದ ಮುಂದೆ ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದರು.
ಬೀಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ, ಎಡಿಸಿ ವಿಜಯಕುಮಾರ ಹೊನಕೇರಿ ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾಗಿದ್ದಾರೆ.
ಬಾಣಂತಿ ಕಲ್ಪನಾ ಲಮಾಣಿ ಸಾವಿನ ತನಿಖೆ ಮಾಡ್ತಿವಿ. ಈಗಾಗಲೇ ಎಂಎಲಸಿ ಮಾಡಿಸಿದ್ದೇವೆ. ಬಾಣಂತಿ ಸಾವಿನ ತನಿಖೆಗೆ ಒಂದು ಕಮಿಟಿ ರಚಿಸಿ ವರದಿ ತರೆಸಿ ಕ್ರಮ ಜರುಗಿಸುತ್ತೇವೆ ಎಂದು ಬೀಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ ಆಶ್ವಾಸನೆ ನೀಡಿದ್ದಾರೆ.
ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುತ್ತೇವೆ. ಮೃತಳ ಪತಿಗೆ ಬೀಮ್ಸ್ ಆಸ್ಪತ್ರೆಯಲ್ಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವುದಾಗಿ ಬೀಮ್ಸ್ ನಿರ್ದೇಶಕ ಭರವಸೆ ಕೊಟ್ಟಿದ್ದಾರೆ.
ಹಿರಿಯ ಅಧಿಕಾರಿಗಳ ಭರವಸೆಗೆ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು.