ಧಾರವಾಡ
ಕೇಂದ್ರ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಸಂಸದರು ಆಗಿರುವ ಪ್ರಹ್ಲಾದ ಜೋಶಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಅಭಿಮಾನಿಗಳು ಹಿತೈಶಿಗಳು ಹಾಗೂ ಬಿಜೆಪಿ ನಾಯಕರು , ಕಾರ್ಯಕರ್ತರು ಅರ್ಥಪೂರ್ಣವಾಗಿ ಜನ್ಮದಿನಾಚರಣೆ ಆಚರಿಸಿದರು.
ಬೆಳಿಗ್ಗೆ ಸಂಸದರ ಕುಲದೇವರು ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಗವಂತ ಅವರಿಗೆ ಆಯುಷ್ಯ ಆರೋಗ್ಯ ಕಲ್ಪಿಸಿ ಇನ್ನೂ ಹೆಚ್ಚಿನ ಉನ್ನತ ಹುದ್ದೇಗೇರಿ ಜನಸೇವೆ ಮಾಡಲು ಶಕ್ತಿ ನೀಡಬೇಕೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ ಬಿಸ್ಕತ್ತು ನೀಡಿ ಹುಟ್ಟುಹಬ್ಬವನ್ನ ಅರ್ಥಪೂರ್ಣ ಆಚರಿಸಲಾಯಿತು .
ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಿ ಎರಡು ಬಾರಿ ಕೇಂದ್ರ ಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಲ್ಹಾದ ಜೋಶಿಯವರು 25 ಕೋಟಿ ಅನುದಾನದಡಿ ನಿರ್ಮಿಸಿರುವ ಸುಸಜ್ಜಿತ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣಹಂಪಲು ವಿತರಿಸುವ ಸಂದರ್ಭದಲ್ಲಿ ಸ್ಥಳೀಯ ವೈದ್ಯರು ಸಿಬ್ಬಂದಿ ವರ್ಗ ಸಂಸದರ ಕಾರ್ಯಕ್ಷಮತೆ ಹೊಗಳಿ ಹುಟ್ಟುಹಬ್ಬದ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಅಭಿವೃದ್ಧಿಗೆ ಮತ್ತೊಂದು ಹೆಸರು ಪ್ರಹ್ಲಾದ ಜೋಶಿ ಅವರು. ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪ್ರಮುಖ ಅವಳಿನಗರಗಳಾಗಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ಬಿಟ್ಟರೆ, ಹುಬ್ಬಳ್ಳಿ ಧಾರವಾಡ ನಗರವನ್ನು ಮಾದರಿ ಮಾಡಲು ಹೊರಟಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದ್ದು, ಜೋಶಿ ಜೀ ಅವರ ಕೆಲಸ ನಮಗೆಲ್ಲಾ ಸಂತೋಷದಾಯಕವಾಗಿದೆ. ಅವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ವಿಜಯಾನಂದ ಶೆಟ್ಟಿ, ಮಂಡಳ ಅಧ್ಯಕ್ಷರು ಸುನೀಲಮೋರೆ , ಬಸವರಾಜ ಗರಗ , ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ ,ಮಂಜು ನಡಟ್ಟಿ, ಸವಿತಾ ಅಮರಶೆಟ್ಟಿ, ರಮೇಶ ದೊಡವಾಡ, ಚಂದ್ರಕಲಾ ಕೊಟಬಾಗಿ ,ಸುರೇಶ ಬೆದರೆ, ಜ್ಯೋತಿ ಪಾಟೀಲ ,ರಾಹುಲ ಮಲ್ಲಿಗವಾಡ, ಮರಗಾಲ ಶಕ್ತಿ, ಹಿರೇಮಠ ,ಪುಷ್ಪ ನವಲಗುಂದ, ನಿರ್ಮಲಾ ಕನಿನಾಯ್ಕರ ,ಮಲ್ಲೇಶ ಶಿಂದೆ ಉಪಸ್ಥಿತರಿದ್ದರು.

