ಬೆಳಗಾವಿ
ಸ್ನೇಹಿತೆ ಜೊತೆಯ ಮನೆಗೆ ಊಟಕ್ಕೆ ಹೋಗಿದ್ದ ಯುವಕನ ಮೇಲೆ ಗುಂಡಿನ ದಾಳಿಯಾಗಿರುವ ಘಟನೆ ನಡೆದಿದೆ.
ಬೆಳಗಾವಿಯ ಮಹಾಂತೇಶ ನಗರದ ಕೆಎಂಎಫ್ ಡೈರಿ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ.
ಟಿಳಕವಾಡಿಯ ಧ್ವಾರಕಾನಗರದ ನಿವಾಸಿ ಪ್ರಣೀತ ಕುಮಾರ (31) ಗುಂಡಿನ ದಾಳಿಗೆ ಒಳಗಾದ ವ್ಯಕ್ತಿ. ಎರಡು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಣ್ಣಿನ ಪಕ್ಕದಲ್ಲಿ ಒಂದು ಗುಂಡು, ತೊಡೆ ಭಾಗಕ್ಕೆ ಒಂದು ಗುಂಡು ತಗುಲಿ ಗಾಯ ಆಗಿದೆ. ಬೈಕ್ ಮೇಲೆ ಬಂದ ಇಬ್ಬರಿಂದ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗಾಯಾಳುವಿಗೆ ಬಿಮ್ಸ್ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.