Karunadu Studio

ಅಪರಾಧ ಉತ್ತರ ಕರ್ನಾಟಕ ಬೆಳಗಾವಿ

ರಾಜ್ಯ ಮಹಿಳಾ ಹೋರಾಟಗಾರ್ತಿಗೆ ಲವ್ ಸೆಕ್ಸ್ ದೋಖಾ

ಬೆಳಗಾವಿ

ರಾಜ್ಯ ಮಹಿಳಾ ಹೋರಾಟಗಾರ್ತಿಗೆ ಲವ್ ಸೆಕ್ಸ್ ದೋಖಾ ಆದ ಘಟನೆ ನಡೆದಿದೆ. ನ್ಯಾಯಕ್ಕಾಗಿ ಮೋಸ ಮಾಡಿದ ಯೋಧನ ಮನೆ ಮುಂದೆ ಮಹಿಳೆ ಧರಣಿ ನಡೆಸಿದ್ದಾಳೆ.

ಬೆಳಗಾವಿಯ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆಗೆ ಮೋಸವಾಗಿದೆ ಎಂದು ಹೇಳಲಾಗಿದೆ.

ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ ನಲವಡೆಯಿಂದ ವಂಚನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆರು ವರ್ಷದ ಹಿಂದೆ ಪೆಸ್ಬುಕ್ ನಲ್ಲಿ ಪರಿಚಯ ಆಗಿದ್ದ ಅಕ್ಷಯ ನಲವಡೆ. ತನಗಿಂತ ಹದಿನಾಲ್ಕು ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿ ಪ್ರೇಮ ಎಂದು ಹೇಳಿ, ಮದುವೆ ಆಗುವುದಾಗಿ ಹೋರಾಟಗಾರ್ತಿಗೆ ನಂಬಿಸಿದ್ದ ಎಂದು ಆರೋಪಿಸಲಾಗಿದೆ.

ಆರು ವರ್ಷದ ಹಿಂದೆ ಮನೆಯಲ್ಲಿನ ದೇವರ ಕೋಣೆ ಮುಂದೆ ಪ್ರಮೋದಾ ಮತ್ತು ಅಕ್ಷಯ ಮದುವೆ ಆಗಿದ್ದರು ಎನ್ನಲಾಗಿದೆ.

ಬಳಿಕ ಆತ ಸೇನೆಯಿಂದ ರಜೆಗೆ ಬಂದಾಗ ಪ್ರಮೋದಾ ಬಳಿ ಇರ್ತಿದ್ದ. ಪ್ರಮೋದಾ ಮನೆಯಲ್ಲಿ ಹದಿನೈದು ದಿನಗಳ ಕಾಲ ಉಳಿದು ಹೋಗ್ತಿದ್ದ. ಇದೇ ವೇಳೆ ಆತ ಬೇರೆ ಬೇರೆ ಯುವತಿಯರ ಜೊತೆಗೆ ಸಂಪರ್ಕ ಇರುವುದು ಬೆಳಕಿಗೆ ಬಂದಿದೆ.

ಅದನ್ನ ಪ್ರಶ್ನೆ ಮಾಡಿದ ಬಳಕ ಎಲ್ಲರನ್ನೂ ಬಿಟ್ಟು ಜೊತೆಗೆ ಇರುವುದಾಗಿ ಅಕ್ಷಯ ಹೇಳಿದ್ದ.
ಒಂಬತ್ತು ಜನ ಯುವತಿಯರ ಜೊತೆಗೆ ನಂಟಿರುವುದು ಗೊತ್ತಾಗಿತ್ತು. ಮೊನ್ನೆ ಅಕ್ಷಯ ರಜೆಗೆ ಬಂದಾಗ ಬೇರೊಬ್ಬ ಯುವತಿ ಜೊತೆಗೆ ಎಂಗೆಜ್ಮೆಂಟ್ ಮಾಡಿಕೊಂಡಿದ್ದ.
ಈ ವಿಚಾರ ಗೊತ್ತಾಗಿ ಅಕ್ಷಯ ಮನೆಗೆ ಹೋಗಿದ್ದ ಪ್ರಮೋದಾ ಆರೋಪಿಸಿದ್ದಾರೆ.

ಹಿರಿಯರು, ಕುಟುಂಬಸ್ಥರು ಕೂಡಿಕೊಂಡು ಸರಿಪಡಿಸುವುದಾಗಿ ಹೇಳಿ ಕಳ್ಸಿದ್ದರು. ಬಳಿಕ ಮದುವೆ ಆಗಲ್ಲ ಅಂತಾ ಅಕ್ಷಯ ಉಲ್ಟಾ ಹೊಡೆದಿದ್ದಾನೆ. ಇಂದು ಅಕ್ಷಯ ಮದುವೆ ಆಗಿದ್ದಾನೆ ಅಂತಾ ಆತನ ಮನೆಗೆ ಪ್ರಮೋದಾ ಬಂದಿದ್ದಾಳೆ.

ಅಕ್ಷಯ ಕುಟುಂಬಸ್ಥರು ಮನೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಾಯುವವರೆಗೂ ಮ‌ನೆ ಮುಂದೆ ಕುಡ್ತೇನಿ ಎಂದು ಪ್ರಮೋದಾ ಕಣ್ಣೀರಿಟ್ಟಿದ್ದಾರೆ.

ಸಾಕಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇನೆ ತನ್ನ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ತನಗೆ ನ್ಯಾಯ ಕೊಡಿಸಿ ಅಂತಾ ಕಣ್ಣೀರಿಟ್ಟು ಪ್ರಮೋದಾ ಮನವಿ ಮಾಡಿದ್ದಾರೆ.

karunadustudioeditor

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಉತ್ತರ ಕರ್ನಾಟಕ

ಫೈ ಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ನಾಭಿರಾಜ್ ಸಾವು: ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ…

  • September 16, 2024
ಹುಬ್ಬಳ್ಳಿ ಫೈ ಓವರ್‌ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎ ಎಸ್ ಐ ನಾಭಿರಾಜ್ ದಯಣ್ಣವರ ( 59) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್
Translate »