ಕಿತ್ತೂರು
ಸಿಡಿಲು ಬಡಿದು ಸಾವನ್ನಪ್ಪಿದ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ವಿತರಿಸಿದ- ಶಾಸಕ ವಿನಯ ಕುಲಕರ್ಣಿ
ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದ 71 ರ ಶಾಸಕ ವಿನಯ ಕುಲಕರ್ಣಿ ಅವರು, ಕಿತ್ತೂರಿನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ ಕಣ್ಣೀರು ಒರೆಸುವ ಮೂಲಕ ನುಡಿದಂತೆ ನಡೆಯುತ್ತಿರುವ ನಾಯಕ ಎನಿಸಿಕೊಂಡಿದ್ದಾರೆ.
ಧಾರವಾಡ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ ರೈತ ಭೀಮನಗೌಡ ಪಾಟೀಲ್ ಎನ್ನುವ ರೈತನ ಕುಟುಂಬಕ್ಕೆ 5 ಲಕ್ಷದ ಪರಿಹಾರ ಕೊಡುವ ಮೂಲಕ ಶಾಸಕ ವಿನಯ ಕುಲಕರ್ಣಿ ಬಡ ರೈತನ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಕಿತ್ತೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಮದಲ್ಲಿ ಮೃತ ರೈತನ ಕುಟುಂಬದ ಶಾಂತವ್ವಾ ಪಾಟೀಲರಿಗೆ ತಹಶಿಲ್ದಾರ ಮುಖಾಂತರ ಚೆಕ್ ಹಸ್ತಾಂತರ ಮಾಡಿದರು.
ಇದೇ ಸಮಯದಲ್ಲಿ SMAM 50%. ಸಬ್ಸಿಡಿ scheme ನಲ್ಲಿ ಹಾರೋಬೆಳವಡಿ ಗ್ರಾಮದ ರೈತ ಸೋಮಲಿಂಗಪ್ಪಾ ಬಸಪ್ಪಾ ಎನ್ನುವರಿಗೆ ಟ್ರಾಲಿ
ಹಾಗೂ ಮನಗುಂಡಿ ಗ್ರಾಮದ ರೈತ ಮಹಿಳೆ ಪದ್ಮವ್ವಾ ನಾಯ್ಕರ ಎನ್ನುವರಿಗೆ ಕೃಷಿಗಾಗಿ ಪವರ್ ವಿಂಡರ್ ಯಂತ್ರ ಸೇರಿದಂತೆ
10 ಜನರಿಗೆ ವಿಧವಾ ವೇತನ ಹಾಗೂ ಸಂಧ್ಯಾಸುರಕ್ಷಾ, ಇತರೆ ಪಿಂಚಣಿ ಸೌಲಭ್ಯಗಳನ್ನು ನೀಡಿದರು.
ಜೋತೆಗೆ 6 ಮಂದಿ ಕ್ಷೇತ್ರದ ಫಲಾನುಭವಿಗಳಿಗೆ ನಡಕಟ್ಟಿನ ಕೂರಿಗೆ, ಶಾವಿಗೆ ಯಂತ್ರ, ಹಿಟ್ಟಿನ ಗಿರಣಿ, ರಾಗಿ ಮಶೀನ ಹಸ್ತಾಂತರಿಸಿದರು.

