ಬೆಳಗಾವಿ
ಕುಂದಾನಗರಿಯಲ್ಲಿ ತಬ್ಬಲಿ ತಾಯಿಯ ಕರುನಾಜನಕ ಕಥೆ ನಮ್ಮ ಮುಂದೆ ಬಂದಿದೆ.
ಸರ್ಕಾರಿ ನೌಕರಿಯಲ್ಲಿದ್ರೂ ತಾಯಿಯನ್ನ ನೋಡಿಕೊಳ್ಳದೇ ಅನಾಥ ಮಾಡಿದ ಪಾಪಿ ಮಗನ ಕಥೆ. ಹೆಂಡತಿ ಮಾತು ಕೇಳಿ ಹೆತ್ತಮ್ಮನನ್ನೇ ತಬ್ಬಲಿ ಮಾಡಿದ ಕಟುಕ ಮಗನ ಕಥೆ ಇದು.
ಬೆಳಗಾವಿ ನಗರದಲ್ಲೊಂದು ಮನಕಲಕುವ ಘಟನೆ ಇದಾಗಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿರುವ ಮಗ ಬಸವಂತ ಗೌಡರ. ತನ್ನ 77 ವರ್ಷದ ತಾಯಿ ಬಾಳವ್ವ ಗೌಡರಗೆ ಒಂಟಿಯಾಗಿ ಮಗ ಬಿಟ್ಟಿದ್ದ.
ಮದುವೆಯಾದ ಬಳಿಕ ಹೆಂಡತಿ ಹಾಗೂ ತಾಯಿ ನಡುವೆ ಜಗಳ ಆಗಿದೆ ಅಂತಾ ಹೇಳಲಾಗುತ್ತಿದೆ. ಹೆಂಡತಿ ಮಾತು ಕೇಳಿ ದೇಸೂರ ಗ್ರಾಮದ ಮನೆಯಲ್ಲಿ ತಾಯಿಯನ್ನ ಒಂಟಿಯಾಗಿ ಮಗ ಬಿಟ್ಟಿದ್ದ.
ಅಲ್ಲಿ ಊಟಕ್ಕೂ ಪರದಾಡುವ ಹಿನ್ನೆಲೆ ವೃದ್ಧಾಶ್ರಮಕ್ಕೆ ಸಂಬಂಧಿಕರು ಶಿಪ್ಟ್ ಮಾಡಿದ್ದಾರೆ.ವೃದ್ಧೆ ಬಾಳವ್ವಳನ್ನ ಇಪ್ಪತ್ತು ದಿನದ ಹಿಂದೆ ಸಂಬಂಧಿಕರು ವೃದ್ಧಾಶ್ರಮಕ್ಕೆ ತಂದು ಸೇರಿಸಿದ್ದಾರೆ.
ತಾಯಿಯ ಬಳಿ ಇದ್ದ 120ಗ್ರಾಂ ಚಿನ್ನವನ್ನ ಮಗ ಕಸಿದುಕೊಂಡಿದ್ದಾನೆ. ಹತ್ತು ಎಕರೆ ಆಸ್ತಿಯನ್ನ ತನ್ನ ಹೆಸರಿಗೆ ಮಗ ಬರೆಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮದುವೆಯಾದ ಬಳಿಕ ಮಗ ಬಸವಂತ ರಾಮತೀರ್ಥ ನಗರದಲ್ಲಿ ಮನೆ ಮಾಡಿ ವಾಸವಾಗಿದ್ದಾನೆ. ಔಷಧಕ್ಕೂ ಹಣವಿಲ್ಲದೇ, ತಿನ್ನಲು ಪರದಾಡ್ತಿದ್ದ ಆಸ್ತಿವಂತೆ ತಾಯಿ ಬಾಳವ್ವ ವೃದ್ಧಾಶ್ರಮ ಪಾರಾಗಿದ್ದಾರೆ.
ತಂಗಿ ಮಕ್ಕಳಿಂದ ಔಷಧಿ ಪಡೆದು ವೃದ್ಧಾಶ್ರಮದಲ್ಲಿ ಊಟ ಮಾಡ್ತ ಕಾಲ ಕಳೆಯುತ್ತಿದ್ದಾರೆ ವೃದ್ಧೆ ಬಾಳವ್ವ.
ಮಗ ನಾಲ್ಕು ವರ್ಷ ಇದ್ದಾಗ ಬಾಳವ್ವ ಗಂಡನ ಕಳೆದುಕೊಂಡಿದ್ದರು. ಹೀಗಿದ್ರೂ ಕಷ್ಟಪಟ್ಟು ಮಗನನ್ನ ಬೆಳಸಿ ತಂದೆಯ ಕೆಲಸವನ್ನ ಅನುಕಂಪದ ಆಧಾರದ ಮೇಲೆ ಕೊಡಿಸಿದ್ದರು ಬಾಳವ್ವ.
ನೌಕರಿ ಕೊಡಿಸಿ ಮಗನಿಗೆ ಮದುವೆ ಮಾಡಿದ ಮೇಲೆ ತಾಯಿ ಬದುಕು ಬೀದಿಗೆ ಬಿದ್ದಿದೆ. ವೃದ್ಧಾಶ್ರಮದಲ್ಲಿದ್ರೂ ಮಗ ಚೆನ್ನಾಗಿರಲಿ ಅಂತಾ ನಗ್ತಾ ತಾಯಿ ಹಾರೈಕೆ ಮಾಡ್ತಿದ್ದಾರೆ.
ಸೊಸೆ ಕಿರುಕುಳ ಕೊಡ್ತಿದ್ದು ಮಗ ಬಂದು ಕರೆದ್ರೂ ಹೋಗಲ್ಲ ಎಂದು ವೃದ್ಧೆ ಹೇಳಿದ್ದಾರೆ.






