ಬೆಳಗಾವಿ
ವಕ್ಪ್ ವಿರುದ್ಧ ಜನ ಜಾಗೃತಿಯನ್ನು ನಾವು ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ ಕಿತ್ತೂರು ಕರ್ನಾಟಕ ಪ್ರವೇಶ ಮಾಡಿದ್ದೇವೆ. ನಾಳೆ ನಾವೇಲ್ಲ ದೆಹಲಿಗೆ ಹೋಗುತ್ತಿದ್ದೇವೆ. ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇಲ್ಲಿಯವರೆಗೆ ಮಠ, ಮಂದಿರ ವಕ್ಪ್ ಆಗಿದೆ ಅದರ ಬಗ್ಗೆ ವರದಿ ಕೊಡುತ್ತೇವೆ. ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡ್ತಿವಿ. ಅಷ್ಟಕ್ಕೆ ಮಾತ್ರ ನಮ್ಮ ಪ್ರವಾಸವಿದೆ. ಎಂದು ಹೇಳಿದರು.
ಯತ್ನಾಳ ಉಚ್ಛಾಟನೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಹೋರಾಟ ವಿಚಾರವಾಗಿ ಮಾತನಾಡಿ, ಅಯಪ್ಪಾ, ಬಹಳ ದೊಡ್ಡ ಅನಾಹುತ. ಯಡಿಯೂರಪ್ಪ ಮನೆ ಬಿಟ್ಟು ಹೋಗೊದು ಹೇಗೆ. ಯಡಿಯೂರಪ್ಪ ಮನೆಯಲ್ಲಿ ಮಲಗೋದು ಹೇಗೆ, ನನ್ನ ಎದೆ ಹೋಡಿತು ಈಗ. ಬಹಳ ನೋವಿನ ಸಂಗತಿ ಇದು, ಕಣ್ಣಿರು ಬರ್ತಾ ಇದ್ದಾವೆ ಎಂದು ಯತ್ನಾಳ ವ್ಯಂಗ್ಯವಾಡಿದರು.
ಯತ್ನಾಳ ಉಚ್ಚಾಟನೆ ಖಚಿತ ಎಂದು ಮಾಧ್ಯಮದಲ್ಲಿ ಬರ್ತಿದೆ. ಕಳೆದ ಹದಿನೈದು ವರ್ಷಗಳಿಂದ ಯತ್ನಾಳ ಉಚ್ಚಾಟನೆ, ನೋಟಿಸ್ ಎಂದು ಬರುತ್ತಿದೆ. ಯಾಕೆ ಉಚ್ಚಾಟನೆ ಆಗಿಲ್ಲ ಎಂದು ವಿಶೇಷ ಕಾರ್ಯಕ್ರಮ ಮಾಡಿ ಎಂದರು.
ನಾಳೆ ಎಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ಬೇರೆ ಬೇರೆ ವಿಮಾನದಲ್ಲಿ ದೆಹಲಿಗೆ ಹೋಗುತ್ತಿದ್ದೇವೆ. ತಂಡದಲ್ಲಿ ಒಡಕು ಎಂದು ಬಿಂಬಿಸಬೇಡಿ ಎಂದ ಯತ್ನಾಳ ಹೇಳಿದರು.
