ಬೆಳಗಾವಿ
ಯತ್ನಾಳ ವಿರುದ್ಧ ದೂರು ಕೊಟ್ಟಿಲ್ಲ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ, ನಾವು ಯಡಿಯೂರಪ್ಪ ಕುಟುಂಬದ ಯಾವುದೇ ಮಾತಾಡಿಲ್ಲ. ಯಾವುದೇ ಗೊಂದಲ ಇಲ್ಲ. ನಾವು ವಕ್ಫ್ ಬಗ್ಗೆ ಮಾತನಾಡೋದು ತಪ್ಪಾ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ, ವಕ್ಪ್ ಇಡೀ ದೇಶದ ಕ್ಯಾನ್ಸರ್ ಇದೆ. ಜಮೀರ್ ಅಹಮ್ಮದ್ ಖಾನ್ ಹಚ್ಚಿದ ಬೆಂಕಿ ಇದು. 1.15 ಲಕ್ಷ ಎಕರೆ ಎಂದಿದ್ದ ಭೂಪ ಈಗ 6 ಲಕ್ಷ ಎಕರೆ ಕ್ಲೇಮ್ ಮಾಡ್ತಾ ಇದ್ದಾನೆ. ಯಾರ ಬಗ್ಗೆ ಮಾತನಾಡಲು ನಮಗೆ ಕೆಲಸ ಇಲ್ವಾ ಎಂದರು.
ಮಹಾರಾಷ್ಟ್ರ ಸಿಎಂ ಆಯ್ಕೆ ಬಳಿಕ ರಾಜ್ಯ ಬಿಜೆಪಿಗೆ ಸರ್ಜರಿ ವಿಚಾರವಾಗಿ ಮಾತನಾಡಿ, ಮುಂದೆ ಮತ್ತೊಂದು ರಾಜ್ಯದ ಚುನಾವಣೆ ಬರುತ್ತೆ. ಯತ್ನಾಳಗೆ ಏನು ಆಗೊಲ್ಲ, ಯಾರು ಗಾಬರಿ ಆಗಬೇಡಿ. ಯತ್ನಾಳ ಭವಿಷ್ಯದ ಬಗ್ಗೆ ಯಾರು ಚಿಂತೆ ಮಾಡಬೇಡಿ. ಮುಂದೆ ನಾನು ಕರ್ನಾಟಕದ ನಂಬರ್ ಒನ್ ಆಗುತ್ತೆನೆ ಎಂದು ಹೇಳಿದರು.
ನಾನು ಮಾಧ್ಯವರನ್ನು ಕರೆದು ಸರಿಯಾಗಿ ಉತ್ತರ ಕೊಡ್ತಿನಿ. ನನ್ನ ಉಚ್ಚಾಟನೆ ಮಾಡಲು ಮಾಧ್ಯಮದರ ಒತ್ತಡ ಇತ್ತು ಎಂದು ಹೇಳುತ್ತೇನೆ. ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಇದೆಯಾ? ಇಲ್ಲವೇ ಮುಗಿಸಬೇಕು ಎನ್ನುವ ಉದ್ದೇಶ ಇದೆಯಾ ಗೊತ್ತಿಲ್ಲ. ಪ್ರೀತಿ ತೋರಿಸಿ ಮಾತನಾಡಿಸಿ ಆ ಮೇಲೆ ಹೊಡದೇ ಹೊಡಿತೀರಿ ಎಂದರು.
ದೆಹಲಿಯಿಂದ ಬಂದ ಬಳಿಕ ಎರಡನೇ ಹಂತದ ಹೋರಾಟ ನಡೆಯಲಿದೆ. ಚಿಕ್ಕಬಳ್ಳಾಪುರದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇಲ್ಲಿಗೆ ನಾವು ಇದನ್ನು ಬಿಡುವುದಿಲ್ಲ. ಬಹಳಷ್ಟು ಕಾಂಗ್ರೆಸ್ ನಾಯಕರು ಉಪ ಚುನಾವಣೆ ಬಳಿಕ ವಕ್ಪ್ ಹೋರಾಟ ಇರಲ್ಲ ಎಂದಿದ್ರು. ಈಗ ಯಾವ ಚುನಾವಣೆ ಇದೆ ಹೇಳಿ ಎಂದ ಯತ್ನಾಳ ಕೇಳಿದರು.
