ಬೆಳಗಾವಿ
ದೀಪ ಆರಿರುವವರ ಬಗ್ಗೆ ನಾನು ಯಾಕೆ ಮಾತನಾಡಲಿ ಎಂದು ಯಡಿಯೂರಪ್ಪ ಆಪ್ತರಿಗೆ ಬಸನಗೌಡ ಪಾಟೀಲ ಯತ್ನಾಳ, ಟಾಂಗ್ ಕೊಟ್ಟರು.
ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರೇಣುಕಾಚಾರ್ಯ ನಾವೇಲ್ಲ ಜವಾರಿ ಎಂಬ ಹೇಳಿಕೆಗೆ, ದೇಶದಲ್ಲಿ ಹುಟ್ಟಿದವರು ಎಲ್ಲರೂ ಜವಾರಿನೆ. ಹೊರಗಿನಿಂದ ಬಂದವರು ಮಾತ್ರ ಹೈಬ್ರಿಡ್ ಎಂದು ಯತ್ನಾಳ ಹೇಳಿದರು.
ಸವದತ್ತಿ ಯಲ್ಲಮ್ಮನನ್ನು ನೆನಸಿಕೊಳ್ಳಿ. ಅದನ್ನು ಬಿಟ್ಟು ಬೇರೆ ಬೇರೆಯವರನ್ನು ಯಾಕೆ ನೆನಪು ಮಾಡ್ತಿರಿ ಎಂದು ಪರೋಕ್ಷವಾಗಿ ಯಡಿಯೂರಪ್ಪ ಆಪ್ತರಿಗೆ ಟಾಂಗ್ ಕೊಟ್ಟರು ಯತ್ನಾಳ.
ಕಿತ್ತೂರು ಕರ್ನಾಟಕದಲ್ಲಿ ಹೋರಾಟದ ಮೂಲಕ ಸಂದೇಶ ರವಾನೆ ವಿಚಾರವಾಗಿ, ನಾನು ಸಂದೇಶ ರವಾನೆ ಮಾಡಬೇಕು ಅಲ್ಲವೇ. ನಾವೇನು ತ್ಯಾಗಿ ನಾ! ಸನ್ಯಾಸಿ ನಾ! ನಾನು ಏನಾದ್ರು ಆಗಬೇಕು ಅನ್ನಕೊಂತಿನಿ. ಜನರಗೊಸ್ಕರ ಹೋರಾಟ ಮಾಡಬೇಕು ಎನ್ನುವ ಉದ್ದೇಶ ಇದೆ. ಯತ್ನಾಳ್ ಪ್ರತಿಷ್ಠೆ, ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿನಿ. ನನ್ನದು ಇದರಲ್ಲಿ ಸ್ವಾರ್ಥ ಇದೆ. ನಾನೇನು ನಿಸ್ವಾರ್ಥಿ, ತ್ಯಾಗಿ ಮನುಷ್ಯ ಅಲ್ಲ ಎಂದು ಹೇಳಿದರು.
