ಬೆಳಗಾವಿ
ಯತ್ನಾಳ ಸಿಎಂ ಆಗಲಿ ಎಂದು ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಯತ್ನಾಳ ರಮೇಶ ಜಾರಕಿಹೊಳಿ ನೇರವಾದಿ, ಒಳ್ಳೆಯ ಮನುಷ್ಯ. ಅವರನ್ನು ಮುಗಿಸುವ ಯತ್ನ ಮಾಡಿದ್ರು. ದುಷ್ಟ ಶಕ್ತಿಗಳು ಎಷ್ಟೋ ಕಷ್ಟ ಕೊಟ್ಟರು. ಎಲ್ಲವನ್ನೂ ಎದುರಿಸಿ ಹೊರ ಬಂದಿದ್ದಾರೆ. ಅವರನ್ನು ನಾವು ಬೆಂಬಲಿಸಬೇಕು. ಮುಂದಿನ ಸರ್ಕಾರದಲ್ಲಿ ನಮ್ಮ ಗುಂಪಿನಿಂದ ರಮೇಶ ಜಾರಕಿಹೊಳಿಗೆ ಪ್ರಮುಖ ಹುದ್ದೆ ಸಿಗಲಿದೆ ಎಂದು ಹೇಳಿದರು.
ಯತ್ನಾಳ ಬಸವಣ್ಣನವರ ವಿರೋಧಿ ಎಂಬ ಆರೋಪ ವಿಚಾರವಾಗಿ ಮಾತನಾಡಿ. ನನ್ನ ಹೆಸರಿನಲ್ಲಿಯೇ ಬಸವಣ್ಣ ಇದ್ದಾನೆ. ಹಣೆಯ ಮೇಲೆ ವಿಭೂತಿ ಇದೆ ಅಲ್ಲವೆ. ನನ್ನ ಗೋ ಶಾಲೆಯಲ್ಲಿ 1 ಸಾವಿರ ಆಕಳು ಇವೆ. ಯಾವ ಸ್ವಾಮಿಜಿ ಕಟ್ಟಿದ್ದಾರಾ ತೋರಿಸಿ ನೋಡೊಣ ಎಂದು ಪ್ರಶ್ನಿಸಿದರು.
ಬಸವಣ್ಣನವರ ನಿಜವಾದ ಕಾಯಕವೇ ಕೈಲಾಸ ಮಾಡ್ತಾ ಇದ್ದೇವೆ. ಅನುಭವ ಮಂಟಪ ಪೀರ್ ಭಾಷಾ ದರ್ಗಾ ಆಗಿದೆ. ಶ್ರೀಗಳಿಗೆ ಈ ಬಗ್ಗೆ ಮಾತನಾಡಲು ಹೇಳಿ. ಅಂದೋಲಾ ಶ್ರೀಗಳು ಹೋರಾಟ ಆರಂಭ ಮಾಡಿದ್ದಾರೆ. ಪೀರ್ ಭಾಷಾ ಮುಕ್ತವಾಗಬೇಕು. ಬಸವಾದಿ ಶರಣರ ಅನುಭವ ಮಂಟಪ ಪುನರ್ ನಿರ್ಮಾಣ ಆಗಬೇಕು. ಅಯೋಧ್ಯೆ ಮಾದರಿಯಲ್ಲಿ ಹೋರಾಟ ಮಾಡ್ತಿವಿ. ಶ್ರೀರಾಮನ ಮಂದಿರ ಹೇಗೆ ನಿರ್ಮಾಣ ಆಗಿದೆ ಹಾಗೆ ಶಿವಾನುಭವ ಮಂಟಪ ಕಟ್ತಿವಿ. ಪೀರ್ ಭಾಷಾ ದರ್ಗಾ ಬದಲು ಅನುಭವ ಮಂಟಪ ಮಾಡ್ತಿವಿ ಎಂದು ಹೇಳಿದರು.
ವಕ್ಪ್ ಆಸ್ತಿ ಬಗ್ಗೆ ಅನ್ವರ ಮಾನ್ಪಡಿ ವರದಿ ಕೊಟ್ಟಿದ್ದಾರೆ. 2 ಲಕ್ಷ 70 ಸಾವಿರ ಕೋಟಿಯಷ್ಟು ಆಸ್ತಿ ಕಬಳಿಕೆ ಆಗಿದೆ. ಜಾಫರ್ ಶರೀಪ್, ಖಮರುಲ್ ಇಸ್ಲಾಂ, ಸಿಎಂ ಇಬ್ರಾಹಿಂ, ಹ್ಯಾರಿಸ್, ರೆಹಮಾನ್ ಖಾನ್ ಇವರೆಲ್ಲರ ಜಗದ್ಗುರು ಮಲ್ಲಿಕಾರ್ಜುನ ಖರ್ಗೆ ಸಹ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ವರದಿಯಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ ನಾನು ಹೇಳಿಲ್ಲ. ಸಿ ಎಂ ಇಬ್ರಾಹಿಂ ಮಾನ ಹಾನಿಯಾಗಿದೆ ಎಂದು ನೋಟಿಸ್ ಕೊಟ್ಟಿದ್ದಾರೆ. ವರದಿಯ ಪ್ರತಿಯನ್ನು ನಾನು ಕಳುಹಿಸಿದ್ದೇನೆ. ಇನ್ನೋಂದು ವಕ್ಪ್ ಆಗಬೇಕಿರೋ ಆಸ್ತಿ ಎಂದು ಮತ್ತೊಂದು ವರದಿ ಮಾಡಿದ್ದಾರೆ. ಇದರಲ್ಲಿ ಜಿಲ್ಲೆಯಲ್ಲಿ 8ರಿಂದ 10 ಸಾವಿರ ಎಕರೆ ಭೂಮಿ ಇದೆ ಎಂದು ಹೇಳಿದರು.
