ಬೆಳಗಾವಿ
ಬಸನಗೌಡ ಪಾಟೀಲ ಯತ್ನಾಳರ ಉಚ್ಛಾಟನೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಯತ್ನಾಳ ರಾಜ್ಯ ಬಿಜೆಪಿ ಅತಿದೊಡ್ಡ ನೇತಾರರು. ಈ ಭಾಗದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಯತ್ನಾಳ ಹೊಂದಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
1994ರಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು ಚುನಾಯಿತ ಪ್ರತಿನಿಧಿಯಾದವರು. ವಾಜಪೇಯಿ ಸರ್ಕಾರದಲ್ಲಿ ಯತ್ನಾಳ ಕೇಂದ್ರ ಸಚಿವರಾಗಿದ್ದರು. ನಮ್ಮ ಹೋರಾಟ ವಿಜಯೇಂದ್ರ ವಿರುದ್ಧ ಅಲ್ಲ, ವಕ್ಫ್ ಬೋರ್ಡ್ ಭೂಕಬಳಿಕೆ ವಿರುದ್ಧ. ನಾವು ಒಳ್ಳೆಯ ಕೆಲಸ ಮಾಡ್ತಿದ್ದೇವೆ. ಇದು, ಹೈಕಮಾಂಡ್ ಗಮನಕ್ಕಿದೆ ಬಿಜೆಪಿ ಸಂಘಟಿತ ಹೋರಾಟ ಮಾಡ್ತಿದ್ದಾರೆ, ಯತ್ನಾಳ ಪಾಪ್ಯುಲಾರಿಟಿ ಲಾಭ ಬಿಜೆಪಿಗೆ ಆಗುತ್ತದೆ ಎಂದು ಹೇಳಿದರು.
ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆಯೋ? ನಾಲ್ಕು ಬಾಗಿಲಾಗಿದೆಯೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲರೂ ಒಂದೊಂದು ಬಾಗೀಲು, ಒಂದೊಂದು ಅಂಗಡಿ ಓಪನ್ ಆಗಿದೆ. ಸಿದ್ದರಾಮಯ್ಯ ಅವರು ಚೇರ್ ಉಳಿಸಿಕೊಳ್ಳಲು ಸಮಾವೇಶ ಮಾಡ್ತಿದ್ದಾರೆ. ಸಿಎಂ ಚೇರ್ ಮೇಲೆ ಕುಳಿತುಕೊಳ್ಳಲು ಡಿಕೆಶಿ ಕಾಯ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಮಧ್ಯೆ ನಾನು ಸಿಎಂ ಆಗಬೇಕು, ಅಧ್ಯಕ್ಷನಾಗಬೇಕೆಂದು ಸತೀಶ ಜಾರಕಿಹೊಳಿ ಬಯಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಪರಮೇಶ್ವರ ಕೂಡ ಸಿಎಂ ಖುರ್ಚಿಗೆ ಪ್ರಯತ್ನಿಸುತ್ತಿದ್ದಾರೆ. ಊರ ತುಂಬ ಬಾಗಿಲು ಇರೋದು ಕಾಂಗ್ರೆಸ್‌ನಲ್ಲಿ ನಮ್ಮಲ್ಲಿ ಒಂದೇ ಬಾಗಿಲು, ಒಂದೇ ಹೋರಾಟ, ಒಂದೇ ಗುರಿ ಎಂದು ಪ್ರತಾಪ ಸಿಂಹ ಹೇಳಿದರು.
ಮುಡಾ ವಿರುದ್ಧ ಪಾದಯಾತ್ರೆ ಮಾಡಿದ್ದೇವೆ, ವಾಲ್ಮೀಕಿ, ವಕ್ಫ್ ವಿರುದ್ಧ ಧ್ವನಿ ಎತ್ತಿದ್ದೇವೆ. ನಮ್ಮಲ್ಲಿ ಮನೆ ಒಂದು ಮೂರು ಬಾಗಿಲಿಲ್ಲ, ಕಾಂಗ್ರೆಸ್‌ನಲ್ಲಿ ಎಲ್ಲರೂ ಒಂದೊಂದು ಬಾಗಿಲು ಓಪನ್ ಮಾಡಿದ್ದಾರೆ. ಅಧಿಕಾರ ಕಾಂಗ್ರೆಸ್ ಕಡೆ ಇದೆ. ನಾವು ಪ್ರತಿಪಕ್ಷದಲ್ಲಿದ್ದು ಸಂಘಟನೆ ಮಾಡ್ತಿದ್ದೇವೆ. ಪಕ್ಷ ಸಂಘಟನೆಗೆ ಎಲ್ಲರ ಯೋಗದಾನವೂ ಇದೆ ಎಂದು ಪ್ರತಾಪ ಸಿಂಹ ಹೇಳಿದರು.
