ಹಾಸನ
ಹಾಸನದ ಕಿತ್ತಾನೆ ಬಳಿ ಆದ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶ ಕೇಡರ್ ನ ಪ್ರೋಬೆಷನರಿ ಐಪಿಎಸ್ ಅಧಿಕಾರಿ ಹರ್ಷ ಬರ್ಧನ್ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಹರ್ಷ ಬರ್ಧನ್ ಅವರಿಗೆ ಗಂಭೀರವಾಗಿ ತಲೆಗೆ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಹರ್ಷ ಬರ್ಧನ್ ಅವರು ೨೦೨೩ನೇ ಬ್ಯಾಚ್ ನ ಉತ್ತರ ಪ್ರದೇಶ ಕೇಡರ್ ನ ಪ್ರೋಬೆಷನರಿ ಐಪಿಎಸ್ ಅಧಿಕಾರಿ ಆಗಿದ್ದರು.


