ಬೆಳಗಾವಿ
ನೋಟಿಸ್ ಗೆ ಉತ್ತರ ಕೊಡುವ ಶಕ್ತಿ ಯತ್ನಾಳ ಅವರಿಗೆ ಇದೆ. ವಕ್ಫ್ ವಿಚಾರಕ್ಕೆ ಕೊಟ್ಟಿದ್ದಾರಾ ಅಥವಾ ವೈಯಕ್ತಿಕ ವಿಚಾರಕ್ಕೆ ಕೊಟ್ಟಿದ್ದಾರಾ ಗೊತ್ತಿಲ್ಲ ಎಂದು ಕುಮಾರ ಬಂಗಾರಪ್ಪ ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್ ವಿಚಾರವಾಗಿ ಬೆಳಗಾವಿಯಲ್ಲಿ ಕುಮಾರ ಬಂಗಾರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.
ವಕ್ಫ್ ಹೋರಾಟ ಇವತ್ತಿಂದ ನಡೆದಿಲ್ಲ. ವಿಜಯೇಂದ್ರ ಅವರಿಗೂ ನೋಟಿಸ್ ಗೂ ಸಂಬಂಧ ಮಾಡಲ್ಲ. ವಿಜಯೇಂದ್ರ ಅವರು ವಕ್ಫ್ ಯಾವ ಮಟ್ಟಿಗೆ ಯೋಚನೆ ಮಾಡ್ತಿದ್ದಾರೆ ಗೊತ್ತಿಲ್ಲ. ನಮ್ಮ ತಾಲೂಕಿನಲ್ಲಿ ಐದು ಜನ ಕಾರ್ಯಕರ್ತರನ್ನ ವಜಾ ಮಾಡಿದ್ದಾರೆ ಎಂದರು.
ನಾವು ಹೋರಾಟ ಮಾಡ್ತಿದ್ದೇವೆ ಅಂತಾ ರಾಜಕೀಯ ತಗೊಂಡು ಹೋಗೊದು ಸರಿಯಲ್ಲ. ಅಧಿಕಾರದ ಸ್ಥಾನದ ದುರುಪಯೋಗ ಕೂಡ ಆಗುತ್ತಿದೆ. ವಿಜಯೇಂದ್ರ ಅಧಿಕಾರದ ದುರುಪಯೋಗ ಮಾಡ್ತಿದ್ದಾರೆ. ಎಂದರು.
ನೀವು ಕರ್ನಾಟಕದ ರೈತರ ಆಸ್ತಿ ಉಳಿಸಿಕೊಡುವ ಕೆಲಸ ಮಾಡಬೇಕಿತ್ತು. ಜನರ ಬಳಿಗೆ ಹೋಗದೇ, ಹೋಗೊರಿಗೂ ಬಿಡಲ್ಲ. ಹೋದವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡೋಡು ಸರಿಯಲ್ಲ. ವಕ್ಫ್ ವಿಚಾರದಲ್ಲಿ ಕೇಂದ್ರದ ಮಂತ್ರಿಗಳು ಸೇರಿ ಎಲ್ಲರೂ ನಿಂತಿದ್ದಾರೆ. ವಕ್ಫ್ ವಿಚಾರದಲ್ಲಿ ಯತ್ನಾಳ ಅವರ ಜೊತೆಗೆ ನೂರಕ್ಕೆ ನೂರು ನಿಲ್ತೇವಿ ಎಂದು ಕುಮಾರ ಬಂಗಾರಪ್ಪ ಹೇಳಿದರು.
ಇನ್ನೂ ಒಂದು ಸಾವಿರ ದಿನ ರಾಜ್ಯದಲ್ಲಿ ಚುನಾವಣೆಗೆ ಬಾಕಿ ಇದೆ. ಮತ್ತೊಂದು ಸಾರಿ 130 ಸ್ಥಾನ ಗೆಲ್ಲಿಸುವುದು ನಮ್ಮ ಗುರಿ ಇದೆ. ಸ್ಥಳೀಯ ಸಮಸ್ಯೆ ಅರ್ಥ ಮಾಡಿಕೊಂಡು ಪಕ್ಷದಲ್ಲಿ ಹೋಗಬೇಕು. ರೇಣುಕಾಚಾರ್ಯ ಆ್ಯಂಡ್ ಟೀಮ್ ಗೆ ನಾನು ಉತ್ತರ ಕೊಡುವುದು ಸೂಕ್ತವಲ್ಲ. ವಾಲ್ಮೀಕಿ ಹಗರಣ ಪಾದಯಾತ್ರೆ ಮಾಡಬೇಕು ಅಂದಾಗ ವಾಲ್ಮೀಕಿ ಹಗರಣ ಮುಚ್ಚಿ ಹಾಕುವ ರೀತಿ ಆಯ್ತು ಎಂದರು.
ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬೇಕಾ ಎಂಬ ಪ್ರಶ್ನೆಗೆ, ವಿಜಯೇಂದ್ರ ಅವರಿಗೆ ಒಂದು ವರ್ಷದ ಅವಧಿಗೆ ಸ್ಥಾನ ನೀಡಿದ್ರೂ. ಇವಾಗ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಬದಲಾವಣೆ ಮಾಡಬೇಕು ಅಂದ್ರೇ ಕೇಂದ್ರದವರು ಮಾಡ್ತಾರೆ. ಮುಂದುವರೆಸೊದಾದ್ರೇ ಹೇಗೆ ಮುಂದುವರೆಸಬೇಕು ಅಂತಾನು ಹೇಳ್ತಾರೆ. ಸಂಘಟನೆ ದೃಷ್ಟಿಯಿಂದ ಒಂದು ದೊಡ್ಡ ಗ್ಯಾಪ್ ಆಗಿದೆ ಅಂತಾ ಅನ್ಸಿದೆ ಎಂದು ಹೇಳಿದರು. ನನ್ನ ಮತ್ತು ವಿಜಯೇಂದ್ರ ನಡುವೆ ವೈಯಕ್ತಿಕ ಸಂಪರ್ಕ ಇಲ್ಲವೇ ಇಲ್ಲ. ಅವರು ಒಳ್ಳೆ ಕೆಲಸ ಮಾಡಿದಾರೆ ಇಲ್ಲಾ ಅಂತಾ ಫಲಿತಾಂಶಗಳು ಹೇಳಿವೆ. ವಿಜಯೇಂದ್ರ ಬದಲಾವಣೆ ಆಗಬೇಕು ಅನ್ನೋದು ಇದೆ. ಹೊಸ ಅಲೆ ಸೃಷ್ಟಿಯಾಗಬೇಕು ಅಂದ್ರೆ ಬದಲಾವಣೆ ಆಗಬೇಕು. ಯಡಿಯೂರಪ್ಪ ಮಕ್ಕಳಿಗೆ ಕೊಟ್ಟಿದ್ದಕ್ಕೆ ವಿಭಿನ್ನವಾದ ಅಭಿಪ್ರಾಯ ಇದೆ. ವಿಜಯೇಂದ್ರ ಆ್ಯಕ್ಟಿವಿಟೀಸ್ ಗುಂಪಾಗಿ ಪರಿವರ್ತನೆ ಆಗಿದೆ ಅಂತಾ ಅನ್ಸಿದೆ. ಅವರೇ ಮುಂದುವರೆದ್ರೇ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಇರಬೇಕು ಇರ್ತೇವಿ ಎಂದು ಹೇಳಿದರು.
