ಬೆಳಗಾವಿ
ತಕ್ಷಣ ಹೊರಟು ನಾಳೆ ದೆಹಲಿಗೆ ಬನ್ನಿ ಅಂತಾ ಹೇಳಿದ್ರೂ. ಇಲ್ಲರೀ ಸಾಹೇಬರೇ ಹಾಗೇ ಬರಲು ಆಗಲ್ಲ ಎಲ್ಲಾ ಟೀಮ್ ಬರ್ತೇವಿ ಅಂತಾ ಹೇಳಿದ್ರೂ. ಸ್ವಾಭಾವಿಕವಾಗಿ ಯತ್ನಾಳ ಅವರು ಹೇಳಿದರು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರ ಹೇಳಿಕರಯನ್ನ ಕಟ್ ಆ್ಯಂಡ್ ಪೀಸ್ ಮಾಡಿ ಹೈಕಮಾಂಡ್ ಗೆ ತೋರಿಸಿದ್ರೂ. ನಮ್ಮ ರಾಜ್ಯದಲ್ಲಿ ನಾಲ್ಕೈದು ವರ್ಷದಿಂದ ಕಟ್ ಆ್ಯಂಡ್ ಪೀಸ್ ಬಹಳ ನಡೆದಿದೆ. ಹೋಗಿ ಹೈಕಮಾಂಡ್ ತೋರಿಸಿ ಯತ್ನಾಳ ಅವರು ಹೈಕಮಾಂಡ್ ಧಿಕ್ಕರಿಸಿದ್ದಾರೆ ಅಂತಾ ಶೋ ಮಾಡಿದ್ರೂ. ನಾನೇ ಆ ಸ್ಥಳದಲ್ಲಿ ಇದ್ದಿದ್ರೇ ಸಿಟ್ಟು ಬರ್ತಿತ್ತು ಎಂದು ಹೇಳಿದರು. ಒಂದು ಕ್ಯಾಸುವಲ್ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ಉತ್ತರ ಕೊಡ್ತೇವಿ ಇದೇನೂ ಬಾದಕ ಆಗಲ್ಲ. ನಮ್ಮ ಟೀಮ್ ರಾಷ್ಟ್ರೀಯ ನಾಯಕರ ಆಶೀರ್ವಾದದಿಂದ ಪಕ್ಷ ಸಂಘಟನೆ ಮಾಡ್ತಿದ್ದೇವೆ. ನಾವು ಪಕ್ಷ ವಿರೋಧ ಮಾಡ್ತಿಲ್ಲ, ಮಾಡಿದೀವಿ ಅಂದ್ರೇ ಅವರೇನೂ ಕ್ರಮ ಕೈಗೊಳ್ತಾರೆ ತಗೊಳಲಿ. ಪಕ್ಷದ ವೇದಿಕೆಯಲ್ಲಿ ಪಕ್ಷ ಮುಜುಗರ ಆಗುವ ಕೆಲಸ ನಾವು ಮಾಡಿಲ್ಲ ಎಂದು ರಮೇಶ ಜಾರಕಿಹೊಳಿ ಸಾಹುಕಾರ್ ಹೇಳಿದರು.
