ಬೆಳಗಾವಿ
ಪೊಲೀಸ್ ಠಾಣೆ ಎದುರು ರಸ್ತೆ ಮೇಲೆ ಕುಳಿತು ಮದ್ಯ ಭೂಪ ಸೇವಿಸಿದ ಘಟನೆ ನಡೆದಿದೆ.
ಗೋಕಾಕ ಶಹರ ಠಾಣೆ ಎದುರು ಕುಳಿತು ಬಿಂದಾಸ್ ಆಗಿ ಮದ್ಯ ಸೇವನೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿರುವ ಪೋಲಿಸ್ ಠಾಣೆ ಎದುರು ಘಟನೆ ನಡೆದಿದೆ.
ಗೋಕಾಕ ನಗರದ ಉಪ್ಪಾರ ಗಲ್ಲಿಯ ನಿವಾಸಿ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಸಮಸ್ಯೆ ಬಗೆ ಹರಿಸುವಂತೆ ಠಾಣೆಗೆ ವ್ಯಕ್ತಿ ಹೋಗಿದ್ದ.
ಈ ವೇಳೆ ಸಮಸ್ಯೆಗೆ ಸ್ಪಂದಿಸದಿರುವುದಕ್ಕೆ ಈ ಭೂಪ ಪೊಲೀಸ್ ಠಾಣೆ ಎದುರು ಎಣ್ಣೆ ಬಿಟ್ಟುಕೊಂಡ ಎನ್ನಲಾಗಿದೆ. ರಸ್ತೆ ಮೇಲೆ ವಾಹನಗಳು ಓಡಾಡ್ತಿದ್ರೂ ಡೋಂಟ್ ಕೇರ್ ರೀತಿ ಇದ್ದಾನೆ.
ರಸ್ತೆ ಮೇಲೆ ರಾಜಾರೋಷವಾಗಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ವ್ಯಕ್ತಿಯನ್ನ ಪೊಲೀಸರು ಸ್ಥಳದಿಂದ ಎಬ್ಬಿಸಿ ಕಳುಹಿಸಿದ್ದಾರೆ.

