ಬೆಳಗಾವಿ
ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿರುವ ಹಿನ್ನಲೆಯಲ್ಲಿ ಎಂಇಎಸ್ ತನ್ನ ಪುಂಡಾಟ ನಡೆಸಲು ಸಿದ್ದತೆ ನಡೆಸಿದೆ.
ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕಿರಿಕ್ ಮಾಡಿದ್ರೆ, ಕರ್ನಾಟಕ ಸರ್ಕಾರಕ್ಕೆ ಶಿವಸೇನೆ ಪುಂಡರು ಧಮ್ಕಿ ಹಾಕಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಉದ್ಧವ ಠಾಕ್ರೆ ಬಣದ ಶಿವಸೇನೆ ಪುಂಡಾಟಿಕೆ ನಡೆಸಲು ಮುಂದಾಗಿದೆ. ಅಧಿವೇಶನ ಮೊದಲ ದಿನವೇ ಎಂಇಎಸ್ ನಿಂದ ಮಹಾಮೇಳಾವಕ್ಕೆ ಸಿದ್ಧತೆ ನಡೆಸಿದ್ದಾರೆ.
ಅತ್ತ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಹೈವೇ ಬಂದ್ ಮಾಡಲು ಉದ್ಧವ ಠಾಕ್ರೆ ಬಣದ ಶಿವಸೇನೆ ಮುಂದಾಗಿದೆ. ನಿನ್ನೆಯಷ್ಟೇ ಕೊಲ್ಲಾಪುರ ಡಿಸಿಗೆ ಶಿವಸೇನೆ ಪುಂಡರು ಮನವಿ ಕೊಟ್ಟಿದ್ದಾರೆ.
ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ. ಆದ್ರೆ ಎಂಇಎಸ್ ಗೆ ಮಹಾಮೇಳಾವ್ ಗೆ ಕಳೆದ 3 ವರ್ಷದಿಂದ ಅನಮತಿ ಕೊಡ್ತಿಲ್ಲ. ಮಹಾರಾಷ್ಟ್ರದ ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಬೆಳಗಾವಿ ಡಿಸಿ ನಿರ್ಬಂಧ ವಿಧಿಸುತ್ತಿದ್ದಾರೆ. ಈ ಬಾರಿ ಎಂಇಎಸ್ ಮಹಾಮೇಳಾವ್ ಗೆ ಮತ್ತು ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಕ್ಕೆ ಅನುಮತಿ ಕೊಡುವಂತೆ ಸೂಚಿಸಬೇಕು ಎಂದು ಕೇಳಿದ್ದಾರೆ.
ಈ ಬಾರಿಯೂ ಎಂಇಎಸ್ ನ ಮಹಾಮೇಳಾವ್ ಗೆ ಅನುಮತಿ ಕೊಡದಿದ್ದರೆ, ಕರ್ನಾಟಕದ ಸಚಿವರು, ಶಾಸಕರು ಮಹಾರಾಷ್ಟ್ರ, ಕೊಲ್ಲಾಪುರ ಬರ್ತಾರೆ. ಮಹಾರಾಷ್ಟ್ರ ಸರ್ಕಾರ ಅವರನ್ನ ನಿರ್ಬಂಧಿಸುವುದಿಲ್ಲ. ಆದ್ರೆ ನಾವು ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನಕ್ಕೆ ಬಂದ್ರೆ ನಾವು ಅಡ್ಡಿ ಪಡಿಸುತ್ತೇವೆ. ಡಿಸೆಂಬರ್ 9 ರಂದು ಎರಡು ರಾಜ್ಯಗಳ ಮಧ್ಯದ ರಸ್ತೆ ಬಂದ್ ಮಾಡ್ತಿವಿ ಎಂದು ಉದ್ಧವ ಠಾಕ್ರೆ ಬಣದ ಶಿವಸೇನೆ ಪುಂಡರು ಧಮಕಿ ಹಾಕಿದ್ದಾರೆ.
