ಬೆಳಗಾವಿ
ಮಾರಾಟ ಮಾಡಿದ್ದ ಪಾರಿವಾಳ ಹಾರಿ ಹೋಗಿದ್ದಕ್ಕೆ ಚಾಕು ಇರಿದ ಘಟನೆ ನಡೆದಿದೆ.
ಬೆಳಗಾವಿ ಬಸವನ ಕುಡಚಿ ಗ್ರಾಮದಲ್ಲಿ ಘಟನೆ ನಡೆದಿದೆ.
ದರ್ಶನ ಬಾಹುಬಲಿ ಎಂಬಾತ ಆದಿತ್ಯ ಪಾಟೀಲ ಎಂಬಾತನಿಗೆ 1500 ರೂಪಾಯಿಗೆ ಎರಡು ಪಾರಿವಾಳ ಮಾರಾಟ ಮಾಡಿದ್ದ. ಪಾರಿವಾಳ ಮಾರಿ ಹೋದ ಕೆಲವೇ ಹೊತ್ತಿಗೆ ಪಾರಿವಾಳ ಹಾರಿ ಹೋಗಿದೆ.
ಇದೇ ವಿಚಾರಕ್ಕೆ ದರ್ಶನ ಮನಗೆ ಹೋಗಿ ಆದಿತ್ಯ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದರು. ಇದಾದ ಬಳಿಕ ಧರ್ಶನ ಕೂಡ ಗುಂಪು ಕಟ್ಟಿಕೊಂಡು ಬಂದು ಆದಿತ್ಯ ಮೇಲೆ ಹಲ್ಲೆ ಮಾಡಿದ್ದಾನೆ.
ಎರಡು ಕಡೆ ಗಲಾಟೆಯಾಗಿ ಹಲ್ಲೆ ಹಿನ್ನೆಲೆ, ಗಲಾಟೆಯಲ್ಲಿ ಓರ್ವನಿಗೆ ಚಾಕು ಇರಿತವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರೇಬಾಗೇವಾಡಿ ಪೊಲೀಸರಿಂದ ಮೂವರ ಬಂಧನ ಮಾಡಲಾಗಿದೆ. ಮಾಳಮಾರುತಿ ಪೊಲೀಸರಿಂದ ಆರು ಜನರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಹಿರೇಬಾಗೇವಾಡಿ ಮತ್ತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲು ಮಾಡಲಾಗಿದೆ.





