ಬೆಳಗಾವಿ
ಚಪ್ಪಲಿ ಗುರುತಿನಿಂದ ಖರ್ತನಾಕ್ ಬೈಕ್ ಕಳ್ಳ ಅರೇಸ್ಟ್ ಆಗಿದ್ದಾನೆ.
ಕುಂದಾನಗರಿ ಬೆಳಗಾವಿಯಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಬೈಕ್ ಕಳ್ಳ ಸಿಕ್ಕಿಬಿದ್ದಿದ್ದಾನೆ. ಟಿಳಕವಾಡಿ ಪೊಲೀಸರಿಂದ ಖರ್ತನಾಕ್ ಕಳ್ಳನ ಬಂಧನವಾಗಿದೆ.
ಸಿಸಿಟಿವಿಯಲ್ಲಿ ಬೈಕ್ ಎಗರಿಸಿಕೊಂಡು ಹೋಗ್ತಿದ್ದ ಖದೀಮ ಬೆಳಗಾವಿಯ ವೀರಭದ್ರನಗರದ ನಿವಾಸಿ ಹೈದರ್ ಅಲಿ ಶೇಖ್ ಅರೇಸ್ಟ್ ಮಾಡಿ ಅಂದರ್ ಹಾಕಿದ್ದಾರೆ ಪೊಲೀಸರು.
ಬೆಳಗಾವಿ ಆರ್ʼಪಿಡಿ ಸರ್ಕಲ್ ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದನು. ಸಿಸಿಟಿವಿಯಲ್ಲಿ ಸೆರೆ ಸಿಕ್ಕರೂ ಆರೋಪಿ ಸುಳಿವು ಕೊಟ್ಟಿದ್ದು ಆತ ಧರಿಸುತ್ತಿದ್ದ ಚಪ್ಪಲಿ.
ಆರೋಪಿ ಹೈದರ್ ಅಲಿ ಧರಿಸುತ್ತಿದ್ದ ಚಪ್ಪಲಿ ಮೇಲೆ ಎರಡು ಬಿಳಿ ಗೆರೆಗಳಿದ್ದವು. ಆ ಚಪ್ಪಲಿ ಗುರುತಿನ ಮೇಲೆ ಬೈಕ್ ಖದೀಯಲು ಬಂದ ಹೈದರ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಠಾಣೆಗೆ ತಂದು ವಿಚಾರಿಸಿದಾಗ ಪ್ರಕರಣ ಸಂಪೂರ್ಣ ಬೆಳಕಿಗೆ ಬಂದಿದೆ. ಆರೋಪಿಯಿಂದ 7 ಲಕ್ಷ ಮೌಲ್ಯದ 10 ಬೈಕ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.




