ಬೆಳಗಾವಿ
ನಾವೆಲ್ಲರೂ ಮನೆ, ಬೈಕ್, ಎಟಿಎಂ, ಚಿನ್ನ ಕಳ್ಳತನ ಕೇಸ್ ಕೇಳಿದ್ದೇವೆ. ಆದ್ರೆ ನದಿಯ ಬ್ಯಾರೇಜ್ ನ 64 ಗೇಟಗಳೇ ಮಾಯವಾಗಿರುವ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಇರೋ ಬ್ಯಾರೇಜ್ ಗೇಟಗಳೇ ಕಳ್ಳತನ ಮಾಡಲಾಗಿದೆ. ನೀರು ಪೋಲಾಗಿದ್ದರಿಂದ ನದಿ ಪಾತ್ರದ ರೈತರು ಕಂಗಾಲಾಗಿದ್ದಾರೆ. ಬ್ಯಾರೇಜ್ ಗೇಟ್ ಕಳ್ಳರು ಬೆಳಗಾವಿ ಪೊಲೀಸರ ನಿದ್ದೆಗೆಡಿಸಿದ್ದಾರೆ.
ಖದೀಮರು 64 ಬ್ಯಾರೇಜ್ ಗೇಟಗಳನ್ನೇ ಎಗರಿಸಿಕೊಂಡು ಹೋಗಿದ್ದಾರೆ. ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿ ಇರೋ ಮಾರ್ಕಂಡೇಯ ನದಿ ಬ್ಯಾರೇಜ್ ಗೇಟ್ ಗಳು ಇವಾಗಿವೆ.
ಮೇ ತಿಂಗಳಲ್ಲಿ ನದಿಯ ಗೇಟಗಳನ್ನ ತೆಗೆದು ಪಕ್ಕದ ಶೆಡ್ಡನಲ್ಲಿ ಇಡಲಾಗಿತ್ತು. ಆಗಷ್ಟ್ ನಲ್ಲಿ ಶೆಡ್ಡನಲ್ಲಿ ನೋಡಿದಾಗ ಬ್ಯಾರೇಜ್ ಗೇಟಗಳಿದ್ದವು. ಅದೇ ನವೆಂಬರ್ 29 ರಂದು ನೋಡಿದಾಗ ಖದೀಮರು 64 ಬ್ಯಾರೇಜ್ ಗೇಟ್ ಕಳ್ಳತನ ಮಾಡಿರೊದು ಗೊತ್ತಾಗಿದೆ.
ನೀರಾವರಿ ಇಲಾಖೆ ಸಿಬ್ಬಂದಿಯಿಂದ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಜಿಲ್ಲೆಯಲ್ಲಿ ಮಾರ್ಕಂಡೇಯ ನದಿಯಲ್ಲದೇ ಕಳ್ಳರು ಮತ್ತೆ ಬೇರೆ ನದಿಗಳ ಬ್ಯಾರೇಜ್ ಗೇಟ್ ಕಳ್ಳತನ ಮಾಡಿರೋ ಅರೋಪ ಇದೆ.


