ಬೆಂಗಳೂರು
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)150 ಹುದ್ದೆಗಳ (RPC) ನೇಮಕಾತಿಗೆ ಭಾನುವಾರ (ಡಿ.8) ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
3,86,099 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಒಂದೂ ಹುದ್ದೆಗೆ ( one post) 2574 ಜನ ಸ್ಪರ್ಧೆ ಮಾಡಲಿದ್ದಾರೆ.
ನಾಳೆ ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ 2,90,018 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
30 ಜಿಲ್ಲೆಗಳ 1,035 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಕೆಪಿಎಸ್ಸಿ ತಿಳಿಸಿದೆ.
