ಬೆಳಗಾವಿ
ಉತ್ತರ ಕರ್ನಾಟಕದಲ್ಲಿ ಚರ್ಚೆ ಆಗೋದಿಲ್ಲಾ ಅಂತಾ ಚರ್ಚೆ ಆಗ್ತಿದೆ. ಅಜೇಂಡಾದಂತೆ ಉಭಯ ಸದನ ನಡೆಸುತ್ತೇವೆ ಎಂದು ವಿಧಾನಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.
ಡಿಸೆಂಬರ್ 9 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಪತ್ರಿಕಾಗೋಷ್ಠಿ ನಡೆಸಿದರು.
ಡಿಸೆಂಬರ್ 9 ರಂದು ಆಡಳಿತ ವಿಪಕ್ಷದ ನಾಯಕರನ್ನ ಕರೆಸಿ ಸಭೆ ಮಾಡ್ತಿವಿ. ಸದನ ಚೆನ್ನಾಗಿ ನಡೆಯಬೇಕು, ಗಲಾಟೆ, ಪ್ರತಿಭಟನೆ ಮಾಡಬಾರದೆಂದು ಕರೆದು ಹೇಳ್ತಿವಿ. ಅಧಿವೇಶನದ ಮೊದಲ ದಿನವೇ ಮಧ್ಯಾಹ್ನ ಮನವಿ ಮಾಡ್ತಿವಿ ಎಂದು ಹೇಳಿದರು.
ಅಧಿವೇಶನದ ಮೊದಲ ವಾರದ ಮಂಗಳವಾರ, ಬುಧವಾರ, ಅಧಿವೇಶನದ ಎರಡನೇ ವಾರದ ಮಂಗಳವಾರ, ಬುಧವಾರ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡ್ತಿವಿ. ಅದಕ್ಕಾಗಿ ನಾವೇ ಕೆಲವು ಅಂಶಗಳನ್ನ ಕೊಡ್ತಿದ್ದೇವೆ ಎಂದು ತಿಳಿಸಿದರು.
ಮಕ್ಕಳ ಹಕ್ಕುಗಳ ಬಗ್ಗೆ ಚರ್ಚೆ ಗೆ ಆದ್ಯತೆ ಕೊಡ್ತಿವಿ. 43 ಜನ ಎಂಎಲ್ಸಿ ಜೊತೆಗೆ ಮಾತಾಡುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಅಂತಿದ್ದಿವಿ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ತುಂಗಭದ್ರಾ, ಭದ್ರಾ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಆದ್ಯತೆ ಕೊಡ್ತಿದ್ದೇವೆ ಎಂದು ಹೊರಟ್ಟಿ ಹೇಳಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಕೊಡ್ತಿನಿ. ಆದ್ರೆ ಸಭಾಪತಿಯಾಗಿ ನಾನೇ ಹೋರಾಟ ಮಾಡಲು ಆಗುವುದಿಲ್ಲ ಎಂದು ಹೊರಟ್ಟಿ ಹೇಳಿದರು.
19 ಕೋಟಿ 50 ಲಕ್ಷ ರುಪಾಯಿ ವೆಚ್ಚ ಅಧಿವೇಶನಕ್ಕೆ ಮಾಡ್ತಿದ್ದೇವೆ. 13 ಕೋಟಿ ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆ ಗೆ 6 ಕೋಟಿ 50 ಲಕ್ಷ ಕೊಡ್ತಿದ್ದೇವೆ. ಅಂದಾಜು 20 ಕೋಟಿ ವೆಚ್ಚದಲ್ಲಿ ಅಧಿವೇಶನಕ್ಕೆ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸುವ ಬಗ್ಗೆ ಸಿಎಂ ಜೊತೆಗೆ ಸಭೆ ಮಾಡ್ತಿವಿ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿದ್ದೇವೆ. ಇದಕ್ಕೆ ಕೆ.ಎಲ್.ಇ ಮತ್ತು ತಾಜವೇಸ್ಟ್ ನವರು ಶಾಸಕರ ಭವನ ನಿರ್ಮಿಸಲು ಮುಂದಾಗಿದ್ದಾರೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
