ಬೆಳಗಾವಿ
ಅಧಿವೇಶನ ಮುನ್ನ ವರದಿ ತರೆಸಿಕೊಂಡು ಗೆಜೆಟ್ ನೋಟಿಫಿಕೇಶನ್ ಮಾಡಿದ್ರೇ ಹೋರಾಟ ಬಿಡ್ತೇವಿ. ನಿಮಗೆ ಕೊಡಲೇ ಬಾರದು ಅಂತಾ ಇದ್ರೇ ನಮ್ಮ ಹೋರಾಟ ಅನಿವಾರ್ಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಡಿ.10ರಂದು ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಹೋರಾಟದ ವಿಷಯವಾಗಿ, ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರ ಸಮಾಜದವರನ್ನ ಕರೆದು ಮಾತಾಡುವಂತೆ ಮಾಡದೇ. ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದಿರಿ. ಈ ಸಲ ಆರೂವರೆ ಸಾವಿರ ಜನ ಪೊಲೀಸರನ್ನ ನಿಯೋಜನೆ ಮಾಡಿದ್ದಿರಿ. ನೀವು ಮನಸ್ಸು ಮಾಡಿದ್ರೇ ಹದಿನೈದು ನಿಮಿಷದಲ್ಲಿ ಹಿಂದುಳಿದ ಆಯೋಗದ ವರದಿ ತರಿಸಿಕೊಳ್ಳಬಹುದು ಅಂತಾ ಹೇಳಿದ್ರಿ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ನಾವು ಹೋರಾಟಕ್ಕೆ ಸಪೋರ್ಟ್ ಮಾಡಿದ್ವಿ. ಈಗ ಕಾಂಗ್ರೆಸ್ ನವರು ಗುರುಗಳು ಹಾಗೇ ಮಾತಾಡಬಾರದು ಅಂತಾ ಪ್ರವಚನ ಶುರು ಮಾಡಿದ್ದಾರೆ. ಸಿಎಂ ಅವರೇ ನೀವೇ ಪ್ರಚೋದನೆ ಮಾಡಿ ಸಮಾಜದವರ ಮೇಲೆ, ರೈತರ ಮೇಲೆ ಲಾಠಿ ಪ್ರಹಾರ ಮಾಡಬಾರದು ಎಂದು ಹೇಳಿದರು.
ನಮ್ಮನ್ನ ಕರೆದು ಮಾತಾಡದಿದ್ರೂ ಸ್ವಾಮೀಜಿ ಒಬ್ಬರನ್ನ ಕರೆದು ಮಾತಾಡಿ. ಕಾಂಗ್ರೆಸ್ ನ ಶಾಸಕರಾದವರು ಸಿಎಂ ಬಳಿ ಕರೆದುಕೊಂಡು ಹೋಗಿ ಮಾತಾಡಿ. ನಮ್ಮದು ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ಜಗಳ ಇಲ್ಲ. ಯಾರೋ ನಾಲ್ಕು ಜನರ ಮಾತು ಕೇಳಿ ಸಿಎಂ ಅವರು ಹೇಳಬಾರದು ಎಂದು ಹೇಳಿದರು.
ಯಾರೋ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದನ್ನ ನೀವು ಕೇಳಬಾರದು. ಹೋರಾಟ ತಡೆಯುವ ಹುಚ್ಚು ಸಾಹಸ ಮಾಡಬೇಡಿ. ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ ಇದಕ್ಕೆ ಪರಿಹಾರ ಕಂಡು ಹಿಡಿಯಿರಿ. ಇಲ್ಲವಾದರೆ ನಾವು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಸಮುದಾಯದ ಹೆಸರಿನಲ್ಲಿ ಶಾಸಕರು, ಸಚಿವರು ಆದವರು ನಮ್ಮ ಜೊತೆಗೆ ಬನ್ನಿ ಎಂದು ಹೇಳಿದರು.
ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ತಡೆಯಲು ಷಡ್ಯಂತ್ರ ವಿಚಾರವಾಗಿ ಮಾತನಾಡಿ, ಎಲ್ಲಿ ಅವರು ತಡೆಯುತ್ತಾರೆ ಅಲ್ಲೇ ರಸ್ತೆ ತಡೆದು ಕುಳಿತು ಹೋರಾಟ ಮಾಡಿ. ಸಾಧ್ಯವಾದವರು ಹೋರಾಟಕ್ಕೆ ಬಂದು ಭಾಗಿಯಾಗಿ ಎಂದು ಸಮಾಜದ ಜನರಿಗೆ ಕರೆ ನೀಡಿದರು.
