ಬೆಳಗಾವಿ
ಕುಂದಾನಗರಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಮೊದಲ ಅವಧಿಯಲ್ಲೇ ವಕ್ಫ್ ನಿಂದ ಆದ ಭೂಕಬಳಿಕೆ ಕುರಿತ ಚರ್ಚೆಗೆ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಹತ್ತಿರ ಆಗ್ರಹಿಸಿದರು.
ಆ ಸಂದರ್ಭದಲ್ಲಿ ಬಿಜೆಪಿ ಶಾಸಕರು ಮತ್ತು ಕಾಗ್ರೇಸ್ ಸರ್ಕಾರದ ಸಚಿವರು, ಶಾಸಕರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಆಗ್ರಹಿಸಿದರು. ವಾಗ್ವಾದ ಹೆಚಾದ ಕಾರಣ ಸಭಾಧ್ಯಕ್ಷರಾದ ಯು.ಟಿ. ಖಾದರ್ ಸಭೆಯನ್ನು ಮಧ್ಯಾಹ್ನ 2:30ಕ್ಕೆ ಮುಂದುಡಿದರು.

