ಬೆಳಗಾವಿ
ಅವರ ಪಿತುರಿ ನೋಡಿದ್ರೆ ಗೋಲಿಬಾರ್ ಮಾಡಲು ಅವರು ಹೆಸುತ್ತಿಲಿಲ್ಲ ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಸುವರ್ಣಸೌಧದ ಮುಂದೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಆದ ಲಾಠಿ ಪ್ರಹಾರದ ಬಗ್ಗೆ ಅವರು ಆಕ್ರೋಶವನ್ನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೇ ಪಂಚಮಸಾಲಿ ಸಮಾಜಕ್ಕೆ ಲಿಂಗಾಯತರಿಗೆ ನಮ್ಮ ಸರ್ಕಾರ ಯಾವ ಕಾರಣಕ್ಕೂ ಮೀಸಲಾತಿ ಕೋಡಲು ಆಗುವುದಿಲ್ಲ ಎಂದು ನೀವು ಸ್ಪಷ್ಟಿಕರಣ ನೀವು ಕೊಟ್ಟುಬಿಡಿ. ನಾವು 2028ಕ್ಕೆ, ಯಾವ ಸರ್ಕಾರ ಬೇಕೋ ಅದನ್ನ ಅಧಿಕಾರಕ್ಕೆ ತಂದು ನಾವು ಮೀಸಲಾತಿಯನ್ನ ತೆಗೆದುಕೊಳ್ಳುತ್ತೇವೆ. ಆ ಮೂಲಕ ನ್ಯಾಯ ಪಡೆಯುವ ಪ್ರಯತ್ನ ನಾವು ಮಾಡುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ನಮ್ಮ ಜನ ಕೆಲ ಅಮಾಯಕರನ್ನ ಅರೇಸ್ಟ್ ಮಾಡುವ ಪ್ರಯತ್ನವನ್ನ ಮಾಡಿದ್ದಾರೆ. ಕೂಡಲೇ 24 ಗಂಟೆ ಒಳಗಡೆ ಅವರನ್ನ ಬಿಡುಗಡೆ ಮಾಡುವ ಕೆಲಸ ಮಾಡದೆ ಹೋದರೆ, ಉಗ್ರವಾದ ಹೋರಾಟಕ್ಕೆ ಕರೆ ಕೋಡುವಂತಹ ಕಾರ್ಯ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.
ಸರ್ಕಾರದ ಈ ದುಷ್ಕೃತ್ಯವನ್ನ ಖಂಡಿಸಿ ಗುರುವಾರ ಡಿ.೧೨ರಂದು ರಾಜ್ಯಾದ್ಯಂತ ಎಲ್ಲ ಪಂಚಮಸಾಲಿ ಸಮಾಜ ಬಾಂಧವರು ನಿಮ್ಮ ನಿಮ್ಮ ಹಳ್ಳಿಗಳಲ್ಲಿ, ತಾಲೂಕಿನಲ್ಲಿ ಜಿಲ್ಲಾ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್ ಮಾಡುವ ಮೂಲಕ, ಸರ್ಕಾರದ ನೀತಿಯನ್ನ ಖಂಡಿಸಿ ಎಂದು ಕರೆ ನೀಡಿದರು.
ಮುಖ್ಯಮಂತ್ರಿಗಳು ನಮ್ಮನ್ನ ಕರೆದಿಲ್ಲ. ಅವ್ರು ಕರೆದಿದ್ರೆ ನಾಇಲ್ಲ ಎನ್ನುತ್ತಿರಿಲ್ಲ. ಆದ್ರೆ ನಾವೇ ಅವರನ್ನ ಭೇಟಿ ಮಾಡುವುದಕ್ಕೆ ಹೋರಡಲು ಸಿದ್ದರಾಗಿದ್ವಿ. ಆಗ ನಮ್ಮ ಶಾಂತಿಯುತ ಹೋರಟವನ್ನ ಸೇದೆಬಡಿಯಲು ಈ ರೀತಿ ಮಾಡಿದ್ದಾರೆ ಎಂದು ಅರೋಪಿಸಿದರು.
ಪೊಲೀಸ್ ಎಡಿಜಿಪಿ ಮತ್ತು ಕಮೀಷನರ್ ಅವರನ್ನ ಕೂಡಲೇ ಅಮಾನತ್ತು ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗಾಯಗೊಂಡವರ ಆಸ್ಪತ್ರೆ ವೆಚ್ಚವನ್ನ ನಾವೇಲ್ಲ ಸೇರಿ ಭರಿಸುತ್ತೇವೆ ಎಂದು ಹೇಳಿದರು.


