ಹೈದರಾಬಾದ್
ಹೈದರಾಬಾದ್ ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ ಅವರನ್ನ ವಿಚಾರಣೆ ಸಲುವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಡಿಸೆಂಬರ್ 4ರಂದು ಪುಷ್ಪಾ 2 ಚಲನಚಿತ್ರದ ಮೊದಲ ದಿನದ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್ ಬಳಿ ರಾತ್ರಿ 9 ಗಂಟೆ ವೇಳೆ ಉಂಟಾದ ನುಕು ನುಗ್ಗಲಿನ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
ಪುಷ್ಪಾ 2 ಚಲನಚಿತ್ರದ ಬಿಡುಗಡೆಯ ಮೊದಲ ದಿನ ಚಿತ್ರವನ್ನ ನೋಡಲು ರೇವತಿ ಕುಟುಂಬ ಸಮೇತ ಸಂಧ್ಯಾ ಥಿಯೇಟರ್ ಗೆ ಬಂದಿದ್ದರು. ಮೊದಲ ದಿನದ ಪ್ರದರ್ಶನವಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಚಲನಚಿತ್ರದ ಪೆಚಾರಕ್ಕಾಗಿ ನಟ ಅಲ್ಲು ಅರ್ಜುನ ಸಹ ಸಂಧ್ಯಾ ಥಿಯೇಟರ್ ಗೆ ರಾತ್ರಿ 9 ಗಂಟೆ ಸುಮಾರಿಗೆ ಬರ್ತಾರೆ. ಅವರನ್ನ ನೋಡಲು ಸಾವಿರಾರು ಅಭಿಮಾನಿಗಳು ಅಲ್ಲಿ ಮುತ್ತಿಕ್ಕಿ ಕೊಳ್ತಾರೆ. ಆಗ ಅಲ್ಲಿ ನುಕು ನುಗ್ಗಲು ಉಂಟಾಗಿದೆ. ಜನ ಒಬ್ಬರನ್ನೊಬ್ಬರು ತಳ್ಳಾಡುತ್ತಾರೆ. ಕಾಲ್ತುಳಿತದ ಘಟನೆಯಲ್ಲಿ ರೇವತಿ (35) ಎನ್ನುವ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ತೀವ್ರತರನಾದ ಗಾಯಗಳಾಗಿತ್ತು.
ಈ ಕುರಿತಾಗಿ ಮೃತರ ಪತಿ ಪ್ರಕರಣವನ್ನ ದಾಖಲು ಮಾಡಿದ್ದರು. ಪ್ರಕರಣದ ವಿಚಾರಣೆ ಸಲುವಾಗಿ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ ಅವರನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನಟ ಅಲ್ಲು ಅರ್ಜುನ ಅವರ ವಿಚಾರಣೆ ನಡೆಯುತ್ತಿದೆ.
