ಹೈದರಾಬಾದ್
ಪುಷ್ಪಾ 2 ಚಲನಚಿತ್ರದ ಬಿಡುಗಡೆಯ ಮೊದಲ ದಿನ ಚಿತ್ರವನ್ನ ನೋಡಲು ಕುಟುಂಬ ಸಮೇತ ಸಂಧ್ಯಾ ಥಿಯೇಟರ್ ಗೆ ಬಂದಿದ್ದ ಮಹಿಳೆ ಕಾಲ್ತುಳಿತದಿಂದಾಗಿ ಸಾವಾಗಿದ್ದ ಪ್ರಕರಣದಲ್ಲಿ ಅರೇಸ್ಟ್ ಆಗಿದ್ದ ನಟ ಅಲ್ಲು ಅರ್ಜುನ ಅವರು ಬಿಡುಗಡೆ ಹೊಂದಿದ್ದಾರೆ.
ಹೈದರಾಬಾದ್ ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ ಅವರನ್ನ ವಿಚಾರಣೆ ಸಲುವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ನಿನ್ನೆ ಸಂಜೆ ನಟ ಅಲ್ಲು ಅರ್ಜುನ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದರು. ಸಂಜೆ 5ರ ಒಳಗೆ ಜಾಮೀನು ಜೈಲ್ ಗೆ ತಲುಪದ ಕಾರಣ ಒಂದು ರಾತ್ರಿ ನಟ ಅಲ್ಲು ಅರ್ಜುನ ಜೈಲಿನಲ್ಲಿ ಇರಬೇಕಾಗಿತ್ತು. ಶನಿವಾರ ಬೆಳಿಗ್ಗೆ ಬೇಲ್ ಪಡೆದು ನಟ ಅಲ್ಲು ಅರ್ಜುನ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ.
