ಬೆಂಗಳೂರು
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನಲೆಯಲ್ಲಿ ಇಂದು ನಟ ದರ್ಶನ ಸೆಷನ್ ಕೋರ್ಟ್ ಗೆ ಹಾಜರ ಆಗಿ ಜಾಮೀನು ಬಾಂಡ್ ಗೆ ಸಹಿ ಹಾಕಿದರು.
ನಟ ದರ್ಶನ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಮೀನು ಬಾಂಡ್ ಗೆ ಸಹಿ ಹಾಕಬೇಕಾಗಿರುವ ಕಾರಣ ವೈದ್ಯರ ಅನುಮತಿ ಪಡೆದು ಇಂದು ಸೆಷನ್ ಕೋರ್ಟ್ ಗೆ ಕುಟುಂಬ ಸಮೇತ ಹಾಜರಾದರು.
ಜಾಮೀನು ಪ್ರಕ್ರಿಯೆ ಮುಗಿಸಿ ನಟ ದರ್ಶನ ಆಸ್ಪತ್ರೆಗೆ ತೆರಳಿದ್ದಾರೆ.
