ಬೆಳಗಾವಿ
ಬ್ರಹ್ಮಾನಂದ ಸಾಗರ ಜಾಗ್ರಿ ಇಂಡಸ್ಟ್ರಿ ಮತ್ತು ಅಶಕಿನ್ಸ್ ಬಯೋಪಿಲ್ಸ್ ಕಾರ್ಖಾನೆ ಸಿಬ್ಬಂದಿ ಬೆಳಗಾವಿಯ ಪರಿಸರ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿರುವ ಕಾರ್ಖಾನೆ ಇದಾಗಿದ್ದು, ಸುಮಾರು ನೂರಕ್ಕೂ ಅಧಿಕ ಕಾರ್ಮಿಕರಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮೂರು ವರ್ಷದಿಂದ ಕಾರ್ಖಾನೆಗೆ ಅನುಮತಿ ನೀಡಿದ ಹಿನ್ನೆಲೆ ಪ್ರತಿಭಟನೆ ಮಾಡಿದರು. ವಿಷದ ಬಾಟಲ್ ಹಿಡಿದುಕೊಂಡು ಕಾರ್ಮಿಕರು ಧರಣಿ ಕುಳಿತಿದ್ದರು.
ಯಾರದ್ದೋ ಕುಮ್ಮಕ್ಕಿನಿಂದ ಕಚೇರಿ ಬಾಗಿಲು ಹಾಕಿಕೊಂಡು ಧರಣಿ ಮಾಡುತ್ತಿದ್ದಾರೆ ಎಂದು ಅರೋಪಿಸಲಾಗಿದೆ.
ಕಚೇರಿ ಹೊರ ಭಾಗದಲ್ಲಿ ಡಿಸಿಪಿ, ಇಬ್ಬರು ಎಸಿಪಿ ಹಾಗೂ ನೂರಕ್ಕೂ ಅಧಿಕ ಪೊಲೀಸರು ಕಾಯುತ್ತಿದ್ದರು.
ಪ್ರತಿಭಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆಗಮಿಸಿದರು. ಕಚೇರಿ ಬಾಗಿಲು ತೆಗೆಯುವಂತೆ ಹೋರಾಟಗಾರರಿಗೆ ಸೂಚನೆ ನೀಡಿದರು. ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಕರೆಸುವಂತೆ ಧರಣಿ ನಿರತ ಕಾರ್ಮಿಕರು ಪಟ್ಟುಹಿಡಿದರು.
