ಬೆಳಗಾವಿ
ಕಳೆದ 15 ದಿನಗಳ ಹಿಂದೆ ನಮ್ಮ ಪಕ್ಷದ ಶಾಸಕರ ಪರಿಷತ್ ಸದಸ್ಯರ ಸಭೆ ಮಾಡಿದ್ದೇನೆ. ಉತ್ತರ ಕರ್ನಾಟಕ ವಿಚಾರ ಏನೆಲ್ಲ ಸಮಸ್ಯೆ ಇವೆ ಎಂದು ಪಟ್ಟಿ ಮಾಡಲು ಚರ್ಚೆ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿಂದು ಉತ್ತರ ಕರ್ನಾಟಕದ ಕುರಿತು ಚರ್ಚೆ ವಿಚಾರವಾಗಿ ಅವರು ಬೆಳಗಾವಿಯಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ನೀರಾವರಿ, PWD, ಕೃಷಿ ಯುಕೆಪಿ ವಿಚಾರ ಸೇರಿದಂತೆ ಇತರೆ ಕೆಲಸ ಕುರಿತು ಚರ್ಚೆ ಮಾಡುತ್ತೇವೆ. ಈಗಾ ಸರ್ಕಾರ 9 ದಿನಕ್ಕೆ ಅಧಿವೇಶನ ರದ್ದುಗೊಳಿಸಲು ಮುಂದಾಗಿದೆ. ಮಾಜಿ ಸಿಎಂ ಕೃಷ್ಣ ಅವರ ಸಂತಾಪ ಕಾರಣ ಒಂದು ದಿನ ಅಧಿವೇಶನ ರದ್ದು ಮಾಡಲಾಗಿದೆ. ಉತ್ತರ ಕರ್ನಾಟಕ ಕುರಿತು ಎಷ್ಟೇ ಬೇಡಿಕೆ ಇದ್ದರು ಕೇಳುಬೇಕಿದೆ ಎಂದು ಹೇಳಿದರು.
ಸರ್ಕಾರ ಜನರ ಸಹಾಯಕ್ಕೆ ಬರಬೇಕು. ಆದರೆ ಸರ್ಕಾರಕ್ಕೆ ಜನರ ಕುರಿತು ಯಾವುದೇ ಕಳಕಳಿ ಇಲ್ಲ. ಬೇಗ ಅಧಿವೇಶ ಮುಗಿಸೋಕೆ ಹೊರಟಿದೆ ಎಂದು ಆರ್ ಅಶೋಕ ವಾಗ್ದಾಳಿ ನಡೆಸಿದರು.
ಸರ್ಕಾರ ಹಲವಾರು ಹಗರಣಗಳಲ್ಲಿ ಸಿಲುಕಿದೆ. ವಾಲ್ಮೀಕಿ ಹಗರಣ ಸಿಬಿಐ ನಲ್ಲಿ ಸಿಲುಕಿದೆ. ಮುಡಾ ಕೇಸ್ ನಲ್ಲಿ ಸಿಎಂ ಸಿಲುಕಿದ್ದಾರೆ. ವಕ್ಪ್ ನಲ್ಲಿ ರೈತರು ಕಂಗಾಲಾಗಿದ್ದಾರೆ. ಅಬಕಾರಿ ಇಲಾಖೆಯಲ್ಲಿ 700 ಕೋಟಿ ಹಗರಣ ಆಗಿದ್ದು ಚರ್ಚೆಯಾಗಿದೆ. ಇದೆಲ್ಲ ಬಿಟ್ಟು ಸರ್ಕಾರ ಫಲಾಯನ ಮಾಡುತ್ತಿದೆ. ಕಳೆದ ಬಾರಿಯೂ ಹಾಗೇ ಮಾಡಿದ್ದಾರೆ. ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ವಕ್ಪ್ ವಿಚಾರದಲ್ಲಿ ಅನ್ವರ್ ಮಾನಪ್ಪಾಡಿಗೆ ವಿಜಯೇಂದ್ರ 150 ಕೋಟಿ ಹಣ ಆಮೀಷ ವಿಚಾರವಾಗಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನ ಸಿಲುಕಿಸೋಕೆ ಮಾಡಿದ ತಂತ್ರವಿದು. ಇಂಥ ಆರೋಪದ ಮೂಲಕ ಸರ್ಕಾರ ಅಧಿವೇಶನ ಡೈವರ್ಟ್ ಮಾಡುತ್ತಿದೆ. ಸರ್ಕಾರವೇ ಅನ್ವರ್ ಮಾನಪ್ಪಾಡಿಗೆ ಆಮೀಷ ಒಡ್ಡಿದೆ ಎಂದು ಆರ್ ಆಶೋಕ ಆರೋಪಿಸಿದರು.
ಸರ್ಕಾರ ಹಲವಾರು ಹಗರಣಗಳಲ್ಲಿ ಸಿಲುಕಿದೆ. ಹಾಗಾಗಿ ಚರ್ಚೆ ಮಾಡುತ್ತಿಲ್ಲ. ಅಧಿವೇಶನದಲ್ಲಿ ಎಲ್ಲ ಚರ್ಚೆಗೆ ನಾವು ಸಹಕಾರ ನೀಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡಿಲ್ಲ. ಸಮಗ್ರ ಕರ್ನಾಟಕ ಅಭಿವೃದ್ಧಿ ಚರ್ಚೆ ಆಗಬೇಕಿತ್ತು ಅದು ಆಗುತ್ತಿಲ್ಲ. ಕಳೆದ ಬಾರಿ ಉತ್ತರ ಕರ್ನಾಟಕಕ್ಕೆ ನೀಡಿದ ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ. ಇಂದು ಅದನ್ನೇ ಪ್ರಶ್ನೆ ಮಾಡುತ್ತೇವೆಂದು ಆರ್ ಆಶೋಕ ಹೇಳಿದರು.
