ಬೆಳಗಾವಿ
ಮೈಸೂರು ದಸರಾ ಹೇಗೆ ಬೆಳಕಾಗಿರುತ್ತೋ ಅದೇ ರೀತಿ ಬೆಳಗಾವಿ ಬೆಳಕಾಗಿರುತ್ತೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸ ಹಿನ್ನೆಲೆ ಡಿಸಿಎಂ ಡಿ.ಕೆ. ಶಿವಕುಮಾರ ಶತಮಾನೋತ್ಸವ ಸಿದ್ಧತೆ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸದಾವಕಾಶಗಳು ನಮ್ಮನ್ನ ಹುಡುಕಿಕೊಂಡು ಬರುವುದಿಲ್ಲ. ನಾವು ಅವಕಾಶಗಳನ್ನ ಹುಡುಕಿಕೊಂಡು ಹೋಗಬೇಕು ಅಂತಾ ಇಂದಿರಾಗಾಂಧಿ ನುಡಿಮುತ್ತನ್ನ ಸೋನಿಯಾ ಗಾಂಧಿ ಪುಸ್ತಕ ಬರೆದಿದ್ದಾರೆ. ಆ ಪುಸ್ತಕವನ್ನ ಡಿ.27ರಂದು ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದರು.
ಇದು ನಮ್ಮ ರಾಜ್ಯಕ್ಕೆ ಬಂದ ಅವಕಾಶ. ಡಿ.26ರಂದು ಎಐಸಿಸಿ ಕಾರ್ಯಕಾರಣಿ ಸಭೆಯನ್ನ ಬೆಳಗಾವಿಯಲ್ಲಿ ಮಾಡ್ತಿದ್ದೇವೆ. ನೂರು ವರ್ಷದ ಹಿಂದೆ ಗಾಂಧಿ ಇಂದು ಖರ್ಗೆ ಅದೇ ಸ್ಥಾನದಲ್ಲಿ ಕುಳಿತಿದ್ದಾರೆ. ಇಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನ ಮಾಡುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಬರ್ತಾರೆ. ಡಿ.27ರಂದು ಬೃಹತ್ ಸಮಾವೇಶ ನಡೆಯಲಿದೆ. ಸುವರ್ಣ ಸೌಧದ ಗಾಂಧಿ ಪ್ರತಿಮೆ ಉದ್ಘಾಟನೆಗೆ ಎಲ್ಲ ಪಕ್ಷದವರನ್ನ ಆಹ್ವಾನ ಮಾಡುತ್ತೇವೆ. ನಮ್ಮ ದೇಶ, ನಮ್ಮ ರಾಜ್ಯದಲ್ಲಿ ಯೋಗ ಮುಂದುವರೆಸಿಕೊಂಡು ಹೋಗಬೇಕು. ನಾನು ಈಗ ಅಧ್ಯಕ್ಷರಾಗಿರುವುದು ನನ್ನ ಭಾಗ್ಯ ನನ್ನ ಭಾಗ್ಯ ನನ್ನ ಭಾಗ್ಯ ಎಂದು ಡಿ.ಕೆ. ಶಿವಕುಮಾರ ಹೇಳಿದರು.

