ಅಂತಾರಾಷ್ಟ್ರೀಯ ಕ್ರಿಕೆಟಗೆ ಅಶ್ವಿನ ವಿದಾಯ
ಬೆಂಗಳೂರು
ಖ್ಯಾತ ಕ್ರಿಕೆಟಿಗ, ಆಫ್ ಸ್ಪಿನ್ ಮಾಂತ್ರಿಕ ರವಿಚಂದ್ರನ ಅಶ್ವಿನ ಅಂತಾರಾಷ್ಟ್ರೀಯ ಕ್ರಿಕೆಟಗೆ ವಿದಾಯ ಘೋಷಿಸಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸಬನ್ʼನಲ್ಲಿ ನಡೆಯುತ್ತಿದ್ದ ಬಾರ್ಡರ್ ಗವಾಸ್ಕರ ಟ್ರೋಫಿಯ ಮೂರನೇ ಪಂದ್ಯ ಡ್ರಾ ಮೂಲಕ ಮುಕ್ತಾಯವಾಯಿತು. ಆ ಪಂದ್ಯ ಮುಗಿಯುತ್ತಿದಂದೆಯೇ ಅನಿರಿಕ್ಷಿತವಾಗಿ ರವಿಚಂದ್ರನ ಅಶ್ವಿನ ತಮ್ಮ ವೃತ್ತಿಪರ ಅಂತಾರಾಷ್ಟ್ರೀಯ ಕ್ರಿಕೆಟಗೆ ವಿದಾಯವನ್ನ ಘೋಷಿಸಿದರು.
ರವಿಚಂದ್ರನ ಅಶ್ವಿನ ಶ್ರೀಲಂಕಾ ತಂಡದ ಎದುರು ಜೂನ್ 5, 2010ರಂದು ಭಾರತ ಎಕದಿನ ತಂಡವನ್ನ ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಗೆ ಕಾಲಿಡುತ್ತಾರೆ. ಜಿಂಬಾಂಬೆ ತಂಡದ ಎದುರು ಜೂನ್ 12, 2010ರಂದು ಟಿ20ಯಲ್ಲಿ ಎಕದಿನ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಕಾಲಿಡುತ್ತಾರೆ. ನವೆಂಬರ್ 6, 2011ರಲ್ಲಿ ವೇಸ್ಟ್ ಇಂಡಿಸ್ ತಂಡದ ವಿರುದ್ದದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ʼಗೆ ಪಾದಾರ್ಪಣೆ ಮಾಡಿದರು.
106 ಟೆಸ್ಟ್ ಪಂದ್ಯಗಳಿಂದ 537 ವಿಕೆಟ್ ಕಬಳಿಸಿ 3503 ರನ್ ಕಲೆ ಹಾಕಿದ್ದಾರೆ. 116 ಎಕದಿನ ಪಂದ್ಯಗಳಿಂದ 156 ವಿಕೆಟ್ ಕಬಳಿಸಿ 707 ರನ್ ಕಲೆಹಾಕಿದ್ದಾರೆ. 65 ಟಿ20 ಪಂದ್ಯಗಳಿಂದ 72 ವಿಕೆಟ್ ಕಬಳಿಸಿ 184 ರನ್ ಕಲೆ ಹಾಕಿದ್ದಾರೆ. ಹಾಗೂ ಟೆಸ್ಟ್ ಪಂದ್ಯದಲ್ಲಿ 37 ಇನ್ನಿಂಗ್ಸ್ ಗಳಲ್ಲಿ 5ಕ್ಕೂ ಹೆಚ್ಚು ವಿಕೆಟ್ ಗಳನ್ನ ಕಬಳಿಸಿದ್ದಾರೆ.
ರವಿಚಂದ್ರನ ಅಶ್ವಿನ ಕೇವಲ ಸ್ಪಿನ್ ಬೌಲರ್ ಆಗಿ ಅಷ್ಟೇ ಅಲ್ಲ. ಟೆಸ್ಟ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಆಲ್ ರೌಂಡರ್ ಆಗಿಯು ಸಹ ಗುರುತಿಸಿಕೊಂಡಿದ್ದಾರೆ.

