ಬೆಳಗಾವಿ
ರಾಜಾರೋಷವಾಗಿ ಓಡಾಡ್ತಿದೀರಿ ತಮಗೆ ಅಭಿನಂದನೆಗಳು. ಲಕ್ಷ್ಮೀ ಹೆಬ್ಬಾಳ್ಕರ ಸುಮ್ಮನೆ ಕುಡುವ ಹೆಣ್ಣು ಮಗಳಲ್ಲ. ಹೋರಾಟ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರೂ ನಮ್ಮ ಜೊತೆಗೆ ಇದ್ದಾರೆ. ಪ್ರಿಯಾಂಕಾ ಗಾಂಧಿಯಿಂದ ಹಿಡಿದುಕೊಂಡು ಎಲ್ಲರೂ ಪೋನ್ ಮಾಡಿ ಮಾತಾಡಿದ್ದಾರೆ ಎಂದರು.
ಸಿಎಂ ಅವರು ನಿನ್ನೆ ಮೊನ್ನೆ ಕರೆ ಮಾಡಿ ನನ್ನ ಜೊತೆಗೆ ಮಾತಾಡಿದ್ದಾರೆ. ಮಹಿಳೆಯರು ನನ್ನ ಜೊತೆಗೆ ಇದಾರೆ. ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಅಂದ ಮಾತು ಅಂದ್ರೆ ಸುಮ್ಮನಿರ್ತಿರಾ. ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಸಿ.ಟಿ. ರವಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಕಿಡಿಕಾರಿದರು.

