ಬೆಳಗಾವಿ
ದೇಶದ ಜನರ ಎದುರುಗಡೆ ಸದನದ ಗೌರವವನ್ನ. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ಎಂಎಲ್ಸಿ ಸಿಟಿ ರವಿ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಮಹಿಳಾ ಕುಲದ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ. ಪರಿಷತ್ ನಲ್ಲಿ ಡ್ರಗ್ ಎಡಿಕ್ಟ್ ರಾಹುಲ ಗಾಂಧಿ ಅಂತಾ ಡ್ಯಾನ್ಸ್ ಮಾಡ್ತಿದ್ರೀ. ಹೀಗೆ ಮಾಡುವಾಗ ನಾನು ಸುಮ್ಮನೆ ಕುಳಿತುಕೊಳ್ಳಬೇಕಾ. ರಾಹುಲ ಗಾಂಧಿ ಅವರಿಗೆ ಹೊಳ್ಳಿ ಹೊಳ್ಳಿ ಹೇಳಿದ್ದಕ್ಕೆ ನಾನು ರಿಯಾಕ್ಟ್ ಮಾಡಿದೆ ಎಂದು ಕಿಡಿಕಾರಿದರು.
ನಿಮಗೆ ಕೊಲೆಗಾರ ಅಂದಿದಕ್ಕೆ ನನಗೆ ಆ ಮಾತು ಹೇಳಿದ್ರಿ. ನಿಮ್ಮ ನಾಟಕ ಎನೂ? ಅಷ್ಟು ದೊಡ್ಡ ಪಟ್ಟಿ ಕಟ್ಟಿಕೊಂಡಿದಿರಿ. ಅಬ್ಬಾಬ್ಬಾಬಾ ಅಂತಾ ಸಿ.ಟಿ. ರವಿ ಅವರಿಗೆ ಹೆಬ್ಬಾಳ್ಕರ ಆಕ್ರೋಶ ವ್ಯಕ್ತಪಡಿಸಿದರು.
ದೇವರ ನ್ಯಾಯಾಲಯ ಇದೆ. ದೇವರು ನೋಡಿಕೊಳ್ಳುತ್ತಾನೆ ಎಂದರು.

