ಬೆಳಗಾವಿ
ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ಮುಂದಾದಂತಾಗಿದೆ.
ಖಾನಾಪುರ ಠಾಣೆ ಸಿಪಿಐ ಮಂಜುನಾಥ ನಾಯಕ ಅವರನ್ನ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಿ.ಟಿ. ರವಿ ಅವರ ಬಂಧನ ಬಳಿಕ ಖಾನಾಪುರ ಪೊಲೀಸ್ ಠಾಣೆಗೆ ಅವರನ್ನು ಕರೆದುಕೊಂಡು ಪೊಲೀಸ್ ಆಯುಕ್ತರು ಹೋಗಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನ ಠಾಣೆ ಒಳಗೆ ಬಿಟ್ಟು ಸಭೆ ಮಾಡಿದ್ದಕ್ಕೆ ಅವಕಾಶ ನೀಡಿದ್ದಕ್ಕಾಗಿ, ಮತ್ತು ಠಾಣೆಯ ಸುತ್ತ ಕರ್ತವ್ಯ ಲೋಪದಡಿ ಖಾನಾಪುರ ಠಾಣೆ ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿ ಐಜಿಪಿ ವಿಕಾಸ ಕುಮಾರ ಆದೇಶ ಹೊರಡಿಸಿದ್ದಾರೆ.
ಸಿ.ಟಿ. ರವಿ ಅವರ ಭೇಟಿಗೆ ಬಿಜೆಪಿ ನಾಯಕರಿಗೆ ಅವಕಾಶ ಕೊಟ್ಟಿದ್ದಕ್ಕೆ ಐಜಿಪಿ ಅವರು ಅಮಾನತು ಮಾಡಿದ್ರಾ ಎಂದು ಅನುಮಾನಗಳು ಎಳುತ್ತಿವೆ.
ಆಗ ಖಾನಾಪುರ ಪೊಲೀಸ್ ಠಾಣೆಯಲ್ಲೇ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ ಜಗದೀಶ ಕೂಡ ಇದ್ರೂ. ಹಿರಿಯ ಅಧಿಕಾರಿಗಳು ಇದ್ದಾಗಿಯೂ ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತು ಮಾಡಿದ ಐಜಿಪಿ ವಿಕಾಸ ಕುಮಾರ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಮಿಷನರ್ ಅನುಮತಿ ಮೇರೆಗೆ ಬಿಜೆಪಿ ನಾಯಕರನ್ನ ಠಾಣೆ ಒಳಗೆ ಬಿಟ್ಟಿದ್ದಾಗಿ ಸಿಪಿಐ ಮಂಜುನಾಥ ನಾಯಕ ಹೇಳಿದ್ದಾರೆ ಎನ್ನಲಾಗಿದೆ.


