ಬೆಂಗಳೂರು
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ತಮ್ಮ ಮೇಲೆ ಮಾಡಲು ಯತ್ನಿಸಿದ ವ್ಯಕ್ತಿಗಳನ್ನು ಬಂಧಿಸುವಂತೆ ವಿಧಾನ ಪರಿಷತ ಸದಸ್ಯ ಸಿ.ಟಿ. ರವಿ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಡಿಸೆಂಬರ್ 19ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ವಿಧಾನ ಪರಿಷತನಲ್ಲಿ ನಾನು ಅಸಂವಿಧಾನಿಕ ಪದ ಬಳಕೆ ಮಾಡಿದ್ದೇನೆ ಎಂದು ಸಭಾಪತಿ ಅವರಿಗೆ ದೂರು ನೀಡಿದ್ದರು. ಈ ಕುರಿತಾಗಿ ಸಭಾಪತಿಗಳು ನನ್ನಿಂದ ಸಮಜಾಯಿಸಿ ಪಡೆದು, ಸದನದ ದಾಖಲೆಗಳನ್ನು ಪರಿಶೀಲಿಸಿ ನಂತರ ತಮ್ಮದೆ ಆದ ರೂಲಿಂಗ್ ನೀಡಿರುತ್ತಾರೆ.
ಸದನದ ಕಲಾಪವನ್ನ ಅನಿರ್ಧಾಷ್ಟಾವಧಿಯವರೆಗೆ ಮೂಂದೂಡಿದ ನಂತರ ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಬೋಸರಾಜು, ವಿಧಾನ ಪರಿಷತ ಸದಸ್ಯರಾದ ನಜೀರ್ ಅಹ್ಮದ್, ಬಸವನಗೌಡ ಬಾರ್ದಲಿ, ಚೆನ್ನರಾಜ ಹಟ್ಟಿಹೊಳೆ, ಅವರು ಅವಾಚ್ಯ ಶಬ್ದಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ನಿಂದಿಸಿದ್ದಾರೆ.
ಅಷ್ಟೇ ಅಲ್ಲದೆ ಹೊರಗೆ ಬಾ ನಿನಗೆ ಒಂದು ಗತಿ ಕಾಣಿಸುತ್ತೇವೆ. ನಿನ್ನ ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅವರ ಬೆಂಬಲಿಗರು ಕೂಡ ನನ್ನ ಮೇಲೆ ಸುವರ್ಣ ಸೌಧದಲ್ಲಿ ಹಲ್ಲೆ ಮಾಡಿರುತ್ತಾರೆ. ಮೇಲೆ ಹೆಸರಿಸಿರುವ ವ್ಯಕ್ತಿಗಳು ಮಾಧ್ಯಮದಲ್ಲಿ ಸಹ ನನ್ನ ಗೌರವಕ್ಕೆ ಧಕ್ಕೆ ಬರುವಂತೆ ಹಾಗೂ ಮಾನಹಾನಿಯಾಗುವ ಹಾಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ.
ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ ಸದಸ್ಯ ಸಿ.ಟಿ. ರವಿ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

