ಬೆಳಗಾವಿ
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಬಾಣಂತಿ ಸಾವಿನ ಪ್ರಕರಣ ದಾಖಲಾಗಿದೆ.
ಪೂಜಾ ಎಂಬುವ ಬಾಣಂತಿ ಡಿಸೆಂಬರ್ 24ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮೂರು ಮಕ್ಕಳಾಗಿದ್ದು ಒಂದು ಆಪರೇಷನ್ ಸಹ ಆಗಿತ್ತು ಎಂದು ಬಿಮ್ಸ್ ಆಸ್ಪತ್ರೆಯ ಹೆರಿಗೆ ವೈದ್ಯ ಡಾ. ವಸಂತ ಕಬ್ಬೂರ ಹೇಳಿದ್ದಾರೆ.
ಬಂದಾಗಲೇ ಆಕೆಗೆ ಪ್ರಜ್ಞೆ ಇರಲಿಲ್ಲ ಕೂಡಲೇ ಐಸಿಯುವಿಗೆ ಶಿಪ್ಟ್ ಮಾಡಿದ್ವಿ. ದೇಹ ಪರಿಶೀಲನೆ ನಡೆಸಿದಾಗ ಹಾರ್ಟ್ ವೀಕ್ ಇತ್ತು ಅನ್ನೋದು ಹೇಳಿದ್ವಿ. ಹೆರಿಗೆಯಾದ ಮೇಲೆ ಹಾರ್ಟ್ ದೊಡ್ಡದಾಗಿತ್ತು. ಪಂಪಿಂಗ್ ಆಗದೇ ಇಂದು ಪೂಜಾ ಮೃತಪಟ್ಟಿದ್ದಾಳೆ ಎಂದು ವೈದ್ಯ ಡಾ. ವಸಂತ ಕಬ್ಬೂರ ಹೇಳಿದರು.
ಮಗು 1.6kg ತೂಕ ಇದ್ದು ಅದಕ್ಕೂ ಐಸಿಯುವಿನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ನಮ್ನದು ಯಾವುದೇ ನೆಗ್ಲಿಜೆನ್ಸ್ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

