ಬೆಂಗಳೂರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿ.ಎಸ್. ಷಡಕ್ಷರಿ ಅವರು ಅಧ್ಯಕ್ಷರಾಗಿ ಮರುಆಯ್ಕೆ ಆಗಿದ್ದಾರೆ.
ಕಬ್ಬನ್ ಉದ್ಯಾನವಣದಲ್ಲಿರುವ ಸಂಘದ ಕಚೇರಿಯ ಆವರಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ನೇ ಸಾಲಿನ ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ 507 ಮತಗಳನ್ನು ಪಡೆಯುವ ಮೂಲಕ ಸಿ.ಎಸ್. ಷಡಕ್ಷರಿ ಅವರು ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದಾರೆ.
ಒಟ್ಟು 5.25 ಲಕ್ಷ ಸರ್ಕಾರಿ ನೌಕರರ ಸದಸ್ಯತ್ವ ಹೊಂದಿರುವ ಸಂಘದ 971 ಪ್ರತಿನಿಧಿಗಳ ಮತಗಳು ಇದ್ದವು. ಇನ್ನೊಬ್ಬ ಅಭ್ಯರ್ಥಿಯಾಗಿದ್ದ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳನ್ನು ಪಡೆದಿದ್ದರು. ಸಿ.ಎಸ್. ಷಡಕ್ಷರಿ ಅವರು ಕೃಷ್ಣೇಗೌಡ ಅವರಿಗಿಂತ 65 ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವರುದ್ರಯ್ಯ ವಿ.ವಿ. ಅವರು 485 ಮತಗಳನ್ನು ಪಡೆಯುವ ಮೂಲಕ ಖಜಾಂಚಿಯಾಗಿ ಆಯ್ಕೆಯಾದರು. ಇನ್ನೊಬ್ಬ ಅಭ್ಯರ್ಥಿಯಾಗಿದ್ದ ನಾಗರಾಜ ಜುಮ್ಮನ್ನವರ 467 ಮತಗಳನ್ನು ಪಡೆದಿದ್ದರು.
ಸಿ.ಎಸ್. ಷಡಕ್ಷರಿ ಅವರು ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದಕ್ಕೆ ಹಲವಾರು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು, ವಿವಿಧ ಇಲಾಖಾ ನೌಕರ ಸಂಘದ ಪದಾಥಿಕಾರಿಗಳು ಶುಭಾಶಯಗಳನ್ನ ಕೋರಿದ್ದಾರೆ.


