ಮಹಾರಾಷ್ಟ್ರ
ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತಿ ಸುಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯಲ್ಲಿ ಗಂಗಕೇಡ ನಾಕಾ ಕಾಲೋನಿಯಲ್ಲಿ ನಿನ್ನೆ ರಾತ್ರಿ ಈ ದಾರುಣ ಘಟನೆ ನಡೆದಿದೆ.
ಮೂರನೇ ಮಗು ಕೂಡಾ ಹೆಣ್ಣು ಆಗಿದ್ದಕ್ಕೆ ಪಾಪಿ ಪತಿ ಬೆಂಕಿ ಹಚ್ಚಿದ್ದಾನೆ. ಮೈನಾ ಕಾಳೆ ಜೀವಂತ ಸುಟ್ಟು ಕರಕಲವಾದ ಮಹಿಳೆ.
ರಸ್ತೆ ಪಕ್ಕದಲ್ಲಿ ಇರೋ ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಪತಿ ಕುಂಡಲೀಕ ಕಾಳೆಯಿಂದ ಈ ಹೇಯ ಕೃತ್ಯ ನಡೆದಿದೆ.
ಸ್ಥಳೀಯರಿಂದ ಬೆಂಕಿ ನಂದಿಸಲು ಹರಹಾಸ ಪಡಲಾಯಿತು. ಆದರೂ ಬೆಂಕಿ ತೀವ್ರತೆಗೆ ಮಹಿಳೆ ಬುದುಕುಳಿಯಲಿಲ್ಲ.
ಆರೋಪಿ ಕುಂಡಲೀಕನನ್ನ ಪೊಲೀಸರು ಅರೇಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

