ಬೆಳಗಾವಿ
ಬೆಳಗಾವಿಯಲ್ಲಿ ಗ್ಯಾಸ್ ಸೊರಿಕೆಯಿಂದ ಮನೆ ಮುಂದೆ ಬೆಂಕಿ ಹತ್ತಿಕೊಂಡಿದೆ ಆದರೆ ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.
ಬೆಳಗಾವಿಯ ರಾಮತೀರ್ಥ ನಗರದ ಪಾಟೀಲ ಎಂಬಾತರ ಮನೆಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.
ಮೇಘಾ ಗ್ಯಾಸ್ ಕಂಪನಿಂದ ಗ್ಯಾಸ್ ಕನೆಕ್ಷನ್ ಕೊಡಲಾಗಿರತ್ತದೆ. ಗ್ಯಾಸ್ ಪೈಪನಲ್ಲಿ ಸೋರಿಕೆ ಆಗಿದ್ದರಿಂದ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಮೇಘಾ ಗ್ಯಾಸ್ ಕಂಪನಿಯ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಕಂಪನಿ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸವನ್ನ ಮಾಡಿದ್ದಾರೆ.
ಈ ಬೆಂಕಿ ಅವಘಡದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ, ಎರಡು ಬೈಕ್ ಗಳಿಗೆ ಹಾನಿ ಆಗಿದೆ. ಮನೆ ಮನೆಗೂ ಗ್ರಾಸ್ ಕನೆಕ್ಷನ್ ಪಡೆದುಕೊಂಡ ಮನೆಯಲ್ಲಿ ಘಟನೆ ನಡೆದಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
