ಬೆಳಗಾವಿ
ಕುಂದಾನಗರಿ ಬೆಳಗಾವಿಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ.
ಓಲ್ಡ್ ಮ್ಯಾನ್ ದಹಿಸುವ ಮೂಲಕ ಹೊಸ ವರ್ಷವನ್ನ ಬೆಳಗಾವಿ ಜನರು ಸ್ವಾಗತಿಸಲಿದ್ದರೆ. ಮಧ್ಯರಾತ್ರಿ 12 ಗಂಟೆಗೆ ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಜನರು ಒಲ್ಡ್ ಮ್ಯಾನ್ ದಹಿಸಲಿದ್ದಾರೆ.
ಬೆಳಗಾವಿಯ ಕ್ಯಾಂಪ್ ನಲ್ಲಿ ವಿಕೃತ ಓಲ್ಡ್ ಮ್ಯಾನ್ ಮೂರ್ತಿ ನಿರ್ಮಾಣ ಆಗಿವೆ. ಕಳೆದ 40 ವರ್ಷದಿಂದ ಅಮಿತ ಕಾಂಬಳೆ ಕುಟುಂಬ ಬಗೆ ಬಗೆಯ ಒಲ್ಡ್ ಮ್ಯಾನ್ ಮೂರ್ತಿ ನಿರ್ಮಿಸುತ್ತಾ ಬಂದಿದ್ದಾರೆ.
4 ಅಡಿಯಿಂದ 15 ಅಡಿ ವರೆಗೂ ಒಲ್ಡ್ ಮ್ಯಾನ್ ಮೂರ್ತಿಯನ್ನ ಸಿದ್ಧಮಾಡಲಾಗುತ್ತೆ. 2024ರ ಕಹಿ ಘಟನೆಗಳನ್ನ ದಹಿಸಿ, ಸಂಭ್ರಮದಿಂದ 2025 ಅನ್ನು ಸ್ವಾಗತಿಸಲು ಬೆಳಗಾವಿ ಜನತೆ ಸಜ್ಜಾಗಿದೆ.







