ವಿಜಯಪುರ
ಕೃಷಿ ಹೊಂಡದಲ್ಲಿ ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವನ್ನಪ್ಪಿದ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಗಂಡು ಮಕ್ಕಳೊಂದಿಗೆ ತವರು ಮನೆಗೆ ಬಂದಿದ್ದ ತಾಯಿ ಮಕ್ಕಳು ದುರ್ಮರಣಕ್ಕಿಡಾಗಿದ್ದಾರೆ.
ಗೀತಾ ಬಡಗಿ (28) ಇಬ್ಬರು ಗಂಡು ಮಕ್ಕಳಾದ ಶ್ರವಣ (6) ಶರಣ (4) ಮೃತ ದುರ್ದೈವಿಗಳು. ಮೃತ ಗೀತಾಳನ್ನ ಯಾಳವಾರ ಗ್ರಾಮದ ಶ್ರೀಶೈಲ ಎಂಬುವವರ ಜೊತೆಗೆ ಮದುವೆ ಮಾಡಿ ಕೊಡಲಾಗಿತ್ತು.
ಗೀತಾ ತಂದೆ ರಾಮಪ್ಪ ನಾಯ್ಕೋಡಿ ಎಂಬುವರ ಜಮೀನಿನಲ್ಲಿ ಕೃಷಿ ಹೊಂಡವಿದ್ದು, ಮಕ್ಕಳ ಕರೆದುಕೊಂಡು ಕೃಷಿ ಹೊಂಡದ ಬಳಿ ಹೋದಾಗ ಕಾಲು ಜಾರಿ ಮಕ್ಕಳ ಸಮೇತ ಹೊಂಡಕ್ಕೆ ಬಿದ್ದಿದ್ದಾಳೆ ಎನ್ನಲಾಗಿದೆ.
ಇನ್ನು ಗಂಡನ ಜೊತೆಗೆ ಜಗಳವಾಡಿ ತವರಿಗೆ ಬಂದಿದ್ದ ವೇಳೆ ದುರ್ಘಟನೆ ನಡೆದಿದ್ದು, ಸಾವಿನ ಬಗ್ಗೆ ಸಂಶಯ ಮೂಡಿವೆ. ಇನ್ನು ಸ್ಥಳೀಯರು ಮೂವರ ಶವಗಳನ್ನು ಹೊರ ತೆಗೆದಿದ್ದು, ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.



