ಬೆಳಗಾವಿ
ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಪೊಲೀಸ್ ಠಾಣೆಯಲ್ಲಿಯೇ ಪೊಲೀಸ್ ಪೇದೆ ಆತ್ಮಹತ್ಯೆ ಯತ್ನ ಡ್ರಾಮಾ ಮಾಡಿದ ಘಟನೆ ನಡೆದಿದೆ.
ಬೆಳಗಾವಿ ನಗರದ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಡ್ರಾಮಾ ಮಾಡಿದ ಪೇದೆ ಮುದಕಪ್ಪ ಉದಗಟ್ಟಿ ಎಂದು ತಿಳಿದು ಬಂದಿದೆ. ಇನ್ಸ್ಪೆಕ್ಟರ್ ಡಿ.ಕೆ. ಪಾಟೀಲ ಅವರ ಚೇಂಬರ್ ನಲ್ಲಿ ಪೇದೆ ಮುದಕಪ್ಪ ಆತ್ಮಹತ್ಯೆ ಡ್ರಾಮಾ ಮಾಡಿದ್ದಾರೆ.
ಎರಡು ದಿನ ರಜೆಗೆ ಹೋಗಿ ಬಂದಾತ ಮುದುಕಪ್ಪನಿಗೆ ಪೊಲೀಸ್ ಇನ್ಸ್ಪೆಕ್ಟರ್ ಡ್ಯೂಟಿ ಬದಲಿಸಿದ್ದರು. ಇದನ್ನ ಪ್ರಶ್ನೆ ಮಾಡಿದಾಗ ಬೆಳಗ್ಗೆ ನಿಯೋಜಿಸಿದ್ದ ಜಾಗಕ್ಕೆ ಹೋಗಬೇಕು ಅಂತಾ ಸೂಚನೆ ನೀಡಿದ್ದಾರೆ. ಇದರಿಂದ ತಾನು ವಿಷ ಸೇವಿಸುತ್ತೇನೆಂದು ಕಚೇರಿಯಲ್ಲಿ ಬಿದ್ದು ಪೇದೆ ಉರುಳಾಡಿದ್ದಾರೆ.
ತಕ್ಷಣವೇ ಪೇದೆ ಮುದಕಪ್ಪರನ್ನು ಆಸ್ಪತ್ರೆಗೆ ಶಿಪ್ಟ್ ಮಾಡಿ ಆರೋಗ್ಯ ತಪಾಸಣೆ ಮಾಡಲಾಯಿತು. ಯಾವುದೇ ವಿಷ ಸೇವಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ಮೇಲಾಧಿಕಾರಿಗಳು ಪೇದೆಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.
