ಬೆಳಗಾವಿ
ಉದ್ಯಮಬಾಗ ಠಾಣೆಯಲ್ಲಿ ಪೇದೆಯಿಂದ ಆತ್ಮಹತ್ಯೆಗೆ ಯತ್ನ ಡ್ರಾಮಾ ವಿಚಾರವಾಗಿ ಪೇದೆಯ ನಡೆಯಿಂದ ಪಿಐ ಡಿ.ಕೆ. ಪಾಟೀಲ ಅವರ ಬೀಪಿ ಲೋ ಆಗಿದೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಡಿ.ಕೆ. ಪಾಟೀಲ ಅವರನ್ನ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಯಳ್ಳೂರ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಪಿಐ ಡಿ.ಕೆ. ಪಾಟೀಲ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸುದ್ದಿ ತಿಳಿದು ಖಡೇಬಜಾರ್ ಎಸಿಪಿ ಶೇಖರಪ್ಪ ಅವರು ಉದ್ಯಮಬಾಗ ಠಾಣೆಗೆ ಆಗಮಿಸಿದ್ದಾರೆ.
ಠಾಣೆಯಲ್ಲಿರುವ ಸಿಬ್ಬಂದಿಯಿಂದ ಎಸಿಪಿ ಶೇಖರಪ್ಪ ಅವರು ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ರಾತ್ರಿ 9ಗಂಟೆ ಸುಮಾರಿಗೆ ನಡೆದಿದ್ದ ಹೈಡ್ರಾಮಾ ಕುರಿತು ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಅವರಿಗೆ ಎಸಿಪಿ ಶೇಖರಪ್ಪ ಮಾಹಿತಿ ನೀಡಿದ್ದಾರೆ.
ಒಂದು ತಿಂಗಳ ಹಿಂದೆ ಇದೇ ಠಾಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಪೊಲೀಸ್ ಪೇದೆ ಹೋಗಿದ್ದ. ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು ಪೇದೆ ವಿಠ್ಠಲ ಮುನಿಹಾಳ ಹೋಗಿದ್ದ.
ನವೆಂಬರ 28ರಂದು ಸಿಪಿಐ ಕಿರುಕುಳ ನೀಡ್ತಿದ್ದಾರೆಂದು ಪೇದೆ ಡೆತ್ ನೋಟ್ ಬರೆದಿದ್ದ ಎಂದು ಹೇಳಲಾಗಿದೆ. ತಕ್ಷಣ ಆತನನ್ನ ಹುಡುಕಿ ಸಹೋದ್ಯೋಗಿಗಳು ಜೀವ ಉಳಿಸಿದ್ದರು ಎನ್ನಲಾಗಿದೆ.
